ಕರಾವಳಿ

ತೆಂಕು ಬಡಗು ತಿಟ್ಟುಗಳೆರಡಲ್ಲೂ ವಿಶಿಷ್ಠ ಛಾಪು ಮೂಡಿಸಿದ ಸಾಮಗರು ಅದ್ವೀತಿಯ ಕಲಾವಿದ : ಕಲ್ಕೂರ

Pinterest LinkedIn Tumblr

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದಿ| ವಾಸುದೇವ ಸಾಮಗರಿಗೆ ಶ್ರದ್ಧಾಂಜಲಿ

ಮಂಗಳೂರು : ತೆಂಕು ಬಡಗು ತಿಟ್ಟುಗಳೆರಡಲ್ಲೂ ತನ್ನ ವಿದ್ವತ್ ಪೂರ್ಣ ಹಾಗೂ ಅಸ್ಖಲಿತ ಮಾತುಗಾರಿಕೆಯಿಂದ ವಿಶಿಷ್ಠ ಛಾಪನ್ನು ಮೂಡಿಸಿದ ಒರ್ವ ಅಪ್ರತಿಮ ಕಲಾವಿದ ಮಲ್ಪೆ ವಾಸುದೇವ ಸಾಮಗ ಎಂಬುದಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು.

ಸಾಹಿತ್ಯ ಪರಿಷತ್ತಿನ ವತಿಯಿಂದ ವಾಸುದೇವ ಸಾಮಗರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಅವರು ಮಾತನಾಡುತ್ತಿದ್ದರು. ತಾಳ ಮದ್ದಳೆಯ ಕ್ಷೇತ್ರದಲ್ಲೂ ಮಿಂಚಿದ ಅವರು ತನ್ನದೇ ನೇತೃತ್ವದಲ್ಲಿ ‘ಸಂಯಮಂ’ ತಂಡವನ್ನು ಮುನ್ನಡೆಸಿ ನಾಡಿನಾದ್ಯಂತ ಸಂಚರಿಸಿ ಯಕ್ಷಗಾನ ಕಲೆಯ ಪ್ರಸರಣದಲ್ಲಿ ಬಲುಮುಖ್ಯ ಪಾತ್ರವಹಿಸಿದ್ದರು ಎಂದರು.

ಕಲ್ಕೂರ ಪ್ರತಿಷ್ಠಾನದ ಕಛೇರಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು, ಯಕ್ಷಗಾನ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ , ಪ್ರಸಂಗ ಕರ್ತ ಹಾಗೂ ಅರ್ಥಧಾರಿ ಪೊಳಲಿ ನಿತ್ಯಾನಂದ ಕಾರಂತ, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ, ಜಿ.ಕೆ. ಭಟ್ ಸೆರಾಜೆ, ಸುಂದರ ಶೆಟ್ಟಿ ಬೆಟ್ಟಂಪಾಡಿ ಮೊದಲಾದವರು ನುಡಿನಮನ ಸಲ್ಲಿಸಿದರು.

 

Comments are closed.