ಪ್ರಮುಖ ವರದಿಗಳು

ಬಿಹಾರ ಚುನಾವಣೆ : ಮಹಾಘಟ್ ಬಂಧನ್ ಹಿಂದಿಕ್ಕಿ ಮುನ್ನಡೆ ಸಾದಿಸಿದ ಎನ್‌ಡಿಎ

Pinterest LinkedIn Tumblr

ಪಾಟ್ನಾ: ಬಿಹಾರ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತಏಣಿಕೆ ಕಾರ್ಯ ಇಂದು ಆರಂಭಗೊಂಡಿದ್ದು, ಸದ್ಯಕ್ಕೆ ಎಲ್ಲರು ಗೆಲುವಿನ ನಿರೀಕ್ಷೆ ಇಟ್ಟಿದ್ದ, ಮಹಾಘಟ್ ಬಂಧನ್ ಹಿಂದಿಕ್ಕಿ, ಎನ್ ಡಿ ಎ ಮೈತ್ರಿಕೂಟ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತ್ಯೇಕವಾಗಿ ಜೆಡಿಯು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದು, ಎನ್ ಡಿಎ ವತಿಯಿಂದ ನಡೆದ ಬಿಜೆಪಿಯ ರಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಇದೀಗ ಫಲಿತಾಂಶದಲ್ಲಿಯೂ ಅದರ ಪರಿಣಾಮ ಬೀರಿದೆ ಎಂಬುದು ಸಾಬೀತಾಗಿದೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನಡೆದಂತ ಚುನಾವಣೆಯ ಮತಏಣಿಕೆ ಕಾರ್ಯ ಇಂದು ನಡೆಯುತ್ತಿದೆ. ಇದೀಗ ಬಿಹಾರ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಾಘಟ್ ಬಂಧನ್ ಗೆ ರೋಚಕ ತಿರುವು ಸಿಕ್ಕಿದೆ. ಮಹಾಘಟ್ ಬಂಧನ್ ಹಿಂದಿಕ್ಕಿದ ಎನ್‍ಡಿಎ ಮುನ್ನಡೆಯನ್ನು ಸಾಧಿಸಿದೆ.

ಆರಂಭದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ರ ಮಹಾಘಟಬಂಧನ್ ಮುನ್ನಡೆ ಕಾಯ್ದುಕೊಂಡಿದ್ದರು. ಒಟ್ಟು 243 ಕ್ಷೇತ್ರಗಳ ಪೈಕಿ ಆರ್ ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾಘಟ್ ಬಂಧನ್ 84 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ನಿತೀಶ್ ನೇತೃತ್ವದ ಎನ್ ಡಿಎ ಮೈತ್ರಿಕೂಟ 63 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು.

ಬಳಿಕ ಮಹಾಘಟ್ ಬಂಧನ್ ಗೆ 109 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದರೇ, ಕಾಂಗ್ರೆಸ್ -23, ಪಕ್ಷೇತರರು – 2 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿವೆ. ಬಿಜೆಪಿ+ 125, ಆರ್ ಜೆ ಡಿ + 109 ಹಾಗೂ ಇತರೆ 09 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿವೆ. 243 ಕ್ಷೇತ್ರಗಳಲ್ಲಿ 122 ಮ್ಯಾಜಿಕ್ ನಂಬರ್ ಬಂದ ಪಕ್ಷವು ಅಧಿಕಾರ ಹಿಡಿಯಲಿದೆ.

2015ರಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 53 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಆದರೆ ಈ ಬಾರಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಹೊಂದಿದೆ. ಆದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ 2015ರಲ್ಲಿ 71 ಕ್ಷೇತ್ರಗಳಲ್ಲಿ ಸ್ಥಾನಪಡೆದು ಎನ್ ಡಿಎ ಮೈತ್ರಿಯೊಂದಿಗೆ ಮುಖ್ಯಮಂತ್ರಿ ಹುದ್ದೆ ಏರಿದ್ದರು.

ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದ ವೇಳೆ, ದೇಶದ ಎಲ್ಲಾ ಭಾಗಗಳಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಆಗಿದ್ದರು. ಸುಮಾರು 30ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ವಾಪಸು ಬಂದಿದ್ದಾರೆ.

Comments are closed.