ಕರಾವಳಿ

ಡಿ.18 : ಬಹು ನಿರೀಕ್ಷಿತ ತುಳು ಚಿತ್ರ `ಪೆಪ್ಪೆರೆರೆ ಪೆರೆರೆರೆ’ ಒಟಿಟಿ ಮೂಲಕ ಬಿಡುಗಡೆ

Pinterest LinkedIn Tumblr

ಮಂಗಳೂರು: ನಿಶಾನ್ ವರುಣ್ ಮೂವೀಸ್ ನಿರ್ಮಾಣದ ಬಹು ನಿರೀಕ್ಷಿತ ತುಳು ಚಿತ್ರ `ಪೆಪ್ಪೆರೆರೆ ಪೆರೆರೆರೆ’ ಡಿ.18ರಂದು ಓವರ್ ದ ಟಾಪ್ (ಒಟಿಟಿ) ಮಾಧ್ಯಮದ ಮೂಲಕ ತೆರೆಗೆ ಬಿಡುಗಡೆಗೊಳ್ಳಲಿದೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ವಿಜಯ್ ಶೋಭರಾಜ್ ಪಾವೂರು ಅವರು, ಮಂಗಳೂರು ಪರಿಸರದಲ್ಲಿ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ, ಚಿತ್ರದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ.

ಪ್ರೇಮ, ಸ್ನೇಹ, ಹಾಸ್ಯ, ರೋಚಕ ಸನ್ನಿವೇಶಗಳನ್ನೊಳಗೊಂಡ ಚಿತ್ರ ಇದಾಗಿದೆ. ಇದರ ಹಾಡು ಬಹು ಜನಪ್ರಿಯವಾಗಿದ್ದು, ಜನತೆ ಬೆಂಬಲಿಸಿದ್ದಾರೆ. ಚಿತ್ರದಲ್ಲಿ ಹೊಸ ಕಲಾವಿದರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ನಿಶಾನ್ ವರುಣ್ ಮೂವಿಸ್ ಡಾಟ್ ಕಾಂ  (http://www.nishanvarunmovies.com)  ವೆಬ್ ಸೈಟ್ ಈಗಾಗಲೇ ಬಿಡುಗಡೆಗೊಳಿಸಲಾಗಿದ್ದು, ಈ ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಟಿಕೆಟ್ ಬುಕ್ಕಿಂಗ್ ಮಾಡಿದಾಗ ಮೊಬೈಲ್‌ಗೆ ಸಂದೇಶ ಬರುತ್ತದೆ. ಯಾರಾದರೂ ಟಿಕೆಟ್ ಬುಕ್ಕಿಂಗ್ ಮಾಡಿ ಸಂದೇಶ ಬಾರದಿದ್ದರೆ ನಮ್ಮ ಗಮನಕ್ಕೆ ತರಬಹುದು. ಅಥವಾ ಟಿಕೆಟ್ ನೀಡಿದವರಿಗೆ ತಿಳಿಸಿದರೆ ಅವರು ನಮ್ಮ ಗಮನಕ್ಕೆ ತರುತ್ತಾರೆ ಎಂದವರು ಹೇಳಿದರು.

ಈಗಾಗಲೇ ದೇಶ ವಿದೇಶಗಳಲ್ಲಿರುವ ತುಳು ಭಾಷಿಗರು ಟಿಕೆಟ ಬುಕ್ಕಿಂಗ್ ಮಾಡುತ್ತಿದ್ದಾರೆ. ಟಿಕೆಟ್ ಕೋಡ್ ಇನ್ನೊಬ್ಬರಿಗೆ ನೀಡಿ ಆ ಮೂಲಕ ಅವರು ಹಾಗು ಸ್ನೇಹಿತರು ಟಿಕೆಟ್ ಖರೀದಿಸುವಂತಾದರೆ ನಿಮಗೆ ಹಣ ಬರುತ್ತದೆ. ಈ ಮೂಲಕ ನೀವು ಖರೀದಿಸಿದ ಟಿಕೆಟ್ ನಿಮಗೆ ಉಚಿತವಾಗಲಿದೆ. 3 ಕೋಟಿ ತುಳುವರ ಪೈಕಿ ಶೇ.3ರಷ್ಟಾದರೂ ಮಂದಿ ಚಿತ್ರ ನೋಡಬೇಕು ಎಂಬುದು ನಮ್ಮ ಆಶಯ ಎಂದವರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಾದ ನಿಶಾನ್ ಕೃಷ್ಣ ಭಂಡಾರಿ, ವರುಣ್ ಸಾಲ್ಯಾನ್, ಸಹಾಯಕ ನಿರ್ದೇಶಕ ರಾಹುಲ್, ಸಂಗೀತ ನಿರ್ದೇಶಕ ಗುರು ಬಾಯಾರ್ ಉಪಸ್ಥಿತರಿದ್ದರು.

Comments are closed.