ಕರಾವಳಿ

ಕೇಸರಿ ತೋರಣಗಳಿಂದ ಶೃಂಗಾರಗೊಂಡು ಕಂಗೋಳಿಸುತ್ತಿರುವ ಮಂಗಳೂರು : ಇಡೀ ನಗರ ಕೇಸರಿಮಯ

Pinterest LinkedIn Tumblr

ಮಂಗಳೂರು, ನವೆಂಬರ್.04: ಮಂಗಳೂರಿನಲ್ಲಿ 20 ವರ್ಷಗಳ ಬಳಿಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಕೋರ್‌ ಕಮಿಟಿ ಸಭೆ ನಡೆಯಲಿರುವುದರಿಂದ ಇಡೀ ಮಂಗಳೂರು ಶೃಂಗಾರಗೊಂಡಿದೆ.

2 ದಶಕಗಳ ಬಳಿಕ ಮಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಕಡಲನಗರಿ ಮಂಗಳೂರು ಸಜ್ಜುಗೊಂಡಿದ್ದು, ನಗರದ ಪ್ರಮುಖ ರಸ್ತೆಗಳಿಗೆ ಕೇಸರಿ ತೋರಣವನ್ನು ಕಟ್ಟಿ ಪಕ್ಷದ ಧ್ವಜವನ್ನು ರಸ್ತೆಯುದ್ದಕ್ಕೂ ಹಾಕುವ ಮೂಲಕ ಇಡೀ ನಗರವನ್ನು ಶೃಂಗಾರ ಗೊಳಿಸಲಾಗಿದೆ.

ನಗರದ ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ನವೆಂಬರ್ 5 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಕೋರ್‌ ಕಮಿಟಿ ಸಭೆ ನಡೆಯಲಿದೆ.ಅಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿಯೂ ಅವರು ಭಾಗವಹಿಸಲಿದ್ದಾರೆ

ಸಿಎಂ ಯಡಿಯೂರಪ್ಪ ನ.4ರಂದು ರಾತ್ರಿ ಜಿಲ್ಲೆಗೆ ಆಗಮಿಸಲಿದ್ದಾರೆ. ನ.5ರಂದು ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿದ ಬಳಿಕ 11.30ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಜೊತೆಗೆ ಪಕ್ಷದ ರಾಜ್ಯ ವರಿಷ್ಠ ನಾಯಕರು, ಪದಾಧಿಕಾರಿಗಳು ಹಾಗೂ ವಿವಿಧ ಜವಾಬ್ದಾರಿಗಳನ್ನು ಹೊಂದಿರುವವರ ಸಹಿತ ಸುಮಾರು 150 ಮಂದಿ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಲಿರುವರು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಡಿ.ವಿ. ಸದಾನಂದ ಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ರಾಷ್ಟ್ರೀಯ ಮುಖಂಡರು, ಉಪ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಕಾರಿಣಿಯು ಮಂಗಳೂರಿನಲ್ಲಿ 2 ದಶಕಗಳ ಬಳಿಕ ನಡೆಯುತ್ತದೆ. 2001 ರಲ್ಲಿ ನಗರದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಆಗ ಬಸವರಾಜ ಪಾಟೀಲ್‌ ಸೇಡಂ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.

ಇದೀಗ ಮಂಗಳೂರಿನಲ್ಲಿ ಮತ್ತೊಮ್ಮೆ 2 ದಶಕಗಳ ಬಳಿಕ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ನಗರವನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ.

ನಗರದ ಪ್ರಮುಖ ಸ್ಥಳಗಳಾದ ಪಿವಿಎಸ್ ಸರ್ಕಲ್, ಬೆಸೆಂಟ್ ಸರ್ಕಲ್, ಬಂಟ್ಸ್ ಹಾಸ್ಟೇಲ್ ಸರ್ಕಲ್,ಲಾಲ್ ಬಾಗ್, ಕೊಡಿಯಾಲ್ ಬೈಲ್ ನಲ್ಲಿರುವ ಪಕ್ಷದ ಕಚೇರಿ ಸೇರಿದಂತೆ ಹಲವಾರು ಕಡೆಗಳಲ್ಲಿ ಕೇಸರಿ ತೋರಣವನ್ನು ಕಟ್ಟಿ ರಸ್ತೆಯುದ್ದಕ್ಕೂ ಪಕ್ಷದ ಧ್ವಜವನ್ನು ಕಟ್ಟಿ ಶೃಂಗಾರ ಗೊಳಿಸಲಾಗಿದೆ.

ವಿಶೇಷವಾಗಿ ಕಾರ್ಯಕಾರಿಣಿ ಸಭೆ ನಡೆಯುವ ಪರಿಸರ ಅಂದರೆ ನವಭಾರತ ವೃತ್ತವನ್ನು ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡುವ ಮೂಲಕ ಪರಿಸರವನ್ನು ಸಂಪೂರ್ಣ ಕೇಸರಿಮಯಗೊಳಿಸಲಾಗಿದೆ.

Comments are closed.