ಕರಾವಳಿ

ಸರ್ಕಾರಿ ಅಧಿಕಾರಿಗಳು ಮೈಮರೆಯಬಾರದು: ಲೋಕಾಯುಕ್ತ ಎಸ್ಪಿ ಭಾಸ್ಕರ್ ವಿ.ಬಿ.

Pinterest LinkedIn Tumblr

ಉಡುಪಿ: ಸಾರ್ವಜನಿಕ ರಂಗದಲ್ಲಿ ಪಾರದರ್ಶಕತೆ ಮೂಡಿಸಿದಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಲೋಕಾಯುಕ್ತ ಎಸ್ಪಿ ಭಾಸ್ಕರ್ ವಿ.ಬಿ. ಹೇಳಿದ್ದಾರೆ.

ಅವರು ‘ ಜಾಗೃತ ಭಾರತ – ಸಮೃದ್ಧ ಭಾರತ ‘ ಎಂಬ ಧ್ಯೇಯವಾಕ್ಯದಡಿ ಕರ್ನಾಟಕ ಲೋಕಾಯುಕ್ತ, ಉಡುಪಿ ಜಿಲ್ಲೆ ವತಿಯಿಂದ ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ನಡೆದ ‘ ಜಾಗೃತ ಅರಿವು ಸಪ್ತಾಹ 2020 ‘ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧಿಕಾರಿಗಳು ಕರ್ತವ್ಯ ಮರೆತಾಗ, ದಾರಿ ತಪ್ಪಿದಾಗ ಈ ಜಾಗೃತಿ ಅತ್ಯವಶ್ಯಕ. ಉಡುಪಿಯ ಜನರು ಬುದ್ಧಿವಂತರಾಗಿರುವುದರಿಂದ ಇಲ್ಲಿ ಕೆಲಸ ಮಾಡುವುದು ಅಧಿಕಾರಿಗಳಿಗೆ ಸುಲಭ. ಉಡುಪಿ ಕಂದಾಯ ಇಲಾಖೆ ಕೆಲಸ ಕಾರ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ. ಪ್ರತಿ ಇಲಾಖೆಯ ಪ್ರತಿ ವ್ಯಕ್ತಿಯ ಮಾಹಿತಿ ನಾವು ಪಡೆಯುತ್ತೇವೆ ಎಂದರು.

ಈ ಸಂದರ್ಭ ಲೋಕಾಯುಕ್ತ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ, ರಾಜಶೇಖರ್ ಹಾಗೂ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಸತೀಶ್ ಹಂದಾಡಿ, ರಾಜೇಶ್ ಮೇಸ್ತಾ, ಸತೀಶ್ ಆಚಾರ್, ನಗರಸಭೆಯ ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದರು. ಕಂದಾಯ ಅಧಿಕಾರಿ ಧನಂಜಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Comments are closed.