ಕರ್ನಾಟಕ

ಗುಂಡು ಹಾರಿಸಿ ಕೊಲೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

Pinterest LinkedIn Tumblr

ಬೆಂಗಳೂರು, ನವೆಂಬರ್.02: ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಗ್ರಾಮಗಳಾದ ಅವಡದೇವನಹಳ್ಳಿ, ಮುತ್ಯಾನಲ್ಲೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಗುಂಡು ಹಾರಿಸುವ ಮೂಲಕ ಬಂಧಿಸಲಾದ ಆರೋಪಿಗಳನ್ನು ಗೋಪಿ, ಗಂಗಾ, ಅನಂತ, ಬಸವ ಎಂದು ಗುರುತಿಸಲಾಗಿದೆ.

ಅ. 30ರಂದು ಶೆಟ್ಟಿಹಳ್ಳಿಯಲ್ಲಿ ನಡೆದಿದ್ದ ವಿನೀತ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಠಾಣೆ ಪೊಲೀಸರು ಅವಡದೇವನಹಳ್ಳಿಯಲ್ಲಿ ದಾಳಿ ನಡೆಸಿದ್ದ ವೇಳೆ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ.

ಆದರೆ ಇಬ್ಬರು ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳ ಕಾಲಿಗೆ ಆನೇಕಲ್ ಡಿವೈಎಸ್ಪಿ ಮಹದೇವ್ ಹಾಗೂ ಇನ್ಸ್ ಪೆಕ್ಟರ್ ಕೃಷ್ಣ ಫೈರಿಂಗ್ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅವಡದೇವನಹಳ್ಳಿಯಲ್ಲಿ ಗೋಪಿ, ಗಂಗಾ ಎಂಬ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದರೆ, ಮುತ್ಯಾನಲ್ಲೂರಿನಲ್ಲಿ ಅನಂತ್, ಬಸವ ಎಂಬುವವರ ಮೇಲೆ ಫೈರಿಂಗ್ ಮಾಡಿದ್ದಾರೆ.

ಆರೋಪಿಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಆನೇಕಲ್ ಠಾಣೆ ಪೊಲೀಸರು ಅವಡದೇವನಹಳ್ಳಿಯಲ್ಲಿದ್ದ ಆರೋಪಿಗಳಾದ ಗಂಗಾ ಮತ್ತು ಗೋಪಿಯನ್ನು ಶರಣಾಗುವಂತೆ ಸೂಚಿಸಿದ್ದರು.

ಆದರೆ, ಪೊಲೀಸರ ಮಾತಿಗೆ ಕ್ಯಾರೇ ಎನ್ನದ ಆರೋಪಿಗಳು ಪೇದೆಗಳಾದ ಮಹೇಶ್ ಮತ್ತು ಸುರೇಶ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದರು. ಹೀಗಾಗಿ ಆತ್ಮರಕ್ಷಣೆಗಾಗಿ ಆನೇಕಲ್ ಡಿವೈಎಸ್‌ಪಿ ಮಹಾದೇವ್ ಮತ್ತು ಆನೇಕಲ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣ ಅವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಇದೇ ವೇಳೆ ಮುತ್ಯಾನಲ್ಲೂರಿನಲ್ಲಿ ಅನಂತ್ ಮತ್ತು ಬಸವನಿರುವ ಮಾಹಿತಿ ತಿಳಿದ ಅತ್ತಿಬೆಲೆ, ಸರ್ಜಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದರು.

ಆದರೆ ಆರೋಪಿಗಳು ಶರಣಾಗದೆ ಪಿಸಿಗಳಾದ ಇರ್ಫಾನ್, ನಾಗರಾಜ್‌ ಮೇಲೆ ಹಲ್ಲೆ ಮಾಡಿ ಪರಾರಿ ಯಾಗುವುದಕ್ಕೆ ಯತ್ನಿಸಿದ್ದಾರೆ. ಹೀಗಾಗಿ ಅತ್ತಿಬೆಲೆ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಮತ್ತು ಸರ್ಜಾಪುರ ಎಸ್‌ಐ ಹರೀಶ್‌ ಅವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Comments are closed.