ಕರಾವಳಿ

ದೇವರಗುಂಡಿ ಫಾಲ್ಸ್ ಬಳಿ ಮಾಡೆಲ್‌ಗಳು ಅರೆಬೆತ್ತಲೆ ಫೋಟೊ ಶೂಟ್ ಮಾಡಿದ ಪ್ರಕರಣ ಸದ್ದಿಲ್ಲದೆ ಮುಚ್ಚಿ ಹೋದದ್ದು ಹೇಗೆ?

Pinterest LinkedIn Tumblr

ಮಂಗಳೂರು/ ಸುಳ್ಯ: ವಿವಾದಕ್ಕೆ ಕಾರಣವಾಗಿದ್ದ ಸುಳ್ಯ ಸಮೀಪದ ತೊಡಿಕಾನದ ದೇವರಗುಂಡಿ ಫಾಲ್ಸ್ ಬಳಿ ಬೆಂಗಳೂರಿನ ಮಾಡೆಲ್‌ಗಳು ಅರೆಬೆತ್ತಲೆ ಫೋಟೊ ಶೂಟ್ ಮಾಡಿದ ಪ್ರಕರಣ ಸದ್ದಿಲ್ಲದೆ ಮುಚ್ಚಿ ಹೋದದ್ದು ಹೇಗೆ? ಯಾಕೆ?..

ಸುಳ್ಯ ತಾಲೂಕಿನ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಪಟ್ಟ ದೇವರಗುಂಡಿ ಫಾಲ್ಸ್ ಬಳಿ ಬೆಂಗಳೂರಿನ ಮಾಡೆಲ್‌ಗಳು ಬಂದು ಬಿಕಿನಿ ಫೋಟೊಶೂಟ್ ಮಾಡಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೇ ಇದು ಸ್ಥಳೀಯರ ಆಕ್ರೋಷಕ್ಕೂ ಕಾರಣವಾಗಿತ್ತು.

ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದಲ್ಲಿರುವ ದೇವರಗುಂಡಿ ಫಾಲ್ಸ್ನಲ್ಲಿ ಬೆಂಗಳೂರು ಮೂಲದ ಇಬ್ಬರು ಮಾಡೆಲ್ಗಳು ಅರೆಬೆತ್ತಲೆಯಾಗಿ ಫೋಟೊ ಶೂಟ್ ನಡೆಸಿರುವ ಆರೋಪ ಕೇಳಿಬಂದಿತ್ತು.

ಸುಳ್ಯದ ತೋಡಿಕಾನ ಸಮೀಪ ಇರುವ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನ ಬಳಿ ಇರುವ ಈ ದೇವರಗುಂಡಿ ಫಾಲ್ಸ್ನಲ್ಲಿ ಮಾಡೆಲ್ಗಳು ಫೋಟೊ ಶೂಟ್ ನಡೆಸಿರುವುದು ಸ್ಥಳೀಯರ ಆಕ್ರೋಷಕ್ಕೂ ಕಾರಣವಾಗಿತ್ತು.

ಇತಿಹಾಸದ ಪ್ರಕಾರ ದೇವರಗುಂಡಿಯಲ್ಲಿ ಸಾಕ್ಷಾತ್ ಶಿವನೇ ಸ್ನಾನಕ್ಕೆ ಬರುತ್ತಿದ್ದ ಎನ್ನುವ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಭಕ್ತರಾಗಲಿ ಅಥವಾ ಸ್ಥಳೀಯರಾಗಲಿ ಈ ಫಾಲ್ಸ್ನಲ್ಲಿ ಸ್ನಾನ ಮಾಡುವುದಿಲ್ಲ.
ಇಂತಹ ಪವಿತ್ರ ಸ್ಥಳದಲ್ಲಿ ಬೆಂಗಳೂರಿನ ಇಬ್ಬರು ಮಾಡೆಲ್ ಅರೆಬೆತ್ತಲಾಗಿದ್ದಕ್ಕೆ ಸ್ಥಳೀಯರು ಬಹಳಷ್ಟು ಆಕ್ರೋಷ ವ್ಯಕ್ತಪಡಿಸಿದ್ದರು.

ತಿಂಗಳ ಹಿಂದೆ ಈ ಬಿಕಿನಿ ಫೋಟೊಶೂಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಖತ್ ವೈರಲ್ ಆಗಿದೆ., ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇಲ್ಲಿ ಗುಪ್ತವಾಗಿ ಬಿಕಿನಿ ಫೋಟೊಶೂಟ್ ಮಾಡಿರುವುದು ಸರಿಯಲ್ಲ. ಇದು ಧಾರ್ಮಿಕ ಕ್ಷೇತ್ರ ಆಗಿರುವುದ ರಿಂದ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವು ಕೇಳಿಬಂದಿತ್ತು. ಮಾತ್ರವಲ್ಲದೇ  ಸ್ಥಳೀಯರು ಈ ಕುರಿತಾಗಿ ದೇಗುಲದ ಆಡಳಿತ ಮಂಡಳಿಗೆ ದೂರು ಕೂಡ ನೀಡಿದ್ದರು. ಆದರೆ ಆ ಜಾಗ ದೇವಸ್ಥಾನದ ವ್ಯಾಪ್ತಿಗೆ ಬರುವುದಿಲ್ಲವೆಂದು ಆಡಳಿತ ಮಂಡಳಿಯವರು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಈ ವಿವಾದ ಅಲ್ಲಿಗೆ ಮುಕ್ತಾಯ ಕಂಡಿದೆ.

Comments are closed.