ಕರಾವಳಿ

ಫಳ್ನೀರ್ ಬಳಿ ಸಮೋಸ ವಿಚಾರದಲ್ಲಿ ಘರ್ಷಣೆ : ಅಪರಿಚಿತ ಯುವಕರ ತಂಡದಿಂದ ಶೂಟೌಟ್

Pinterest LinkedIn Tumblr

ಮಂಗಳೂರು, ಆಕ್ಟೊಬರ್.30 : ನಗರದ ಫಳ್ನೀರ್ ಬಳಿಯ ಕೆಫೆ ಒಂದರ ಮುಂದೆ ಕಾಪಿ ಕುಡಿಯುವಾಗ ಸಮೋಸ ವಿಚಾರದಲ್ಲಿ ಅಪರಿಚಿತ ಯುವಕರ ತಂಡವೊಂದು ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಶೂಟೌಟ್ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಫಳ್ನೀರ್ ಬಳಿಯ ಎಂ.ಎಫ್.ಸಿ ಹೊಟೇಲ್ ಬಳಿಯಿರುವ ಕ್ಯಾಂಟೀನ್ ಒಂದರ ಬಳಿ ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಯುವಕರ ತಂಡ ಹಾಗೂಹೊಟೇಲ್ ಸಿಬ್ಬಂದಿಗಳ ಮಧ್ಯೆ ಕ್ಷುಲಕ್ಕ ಕಾರಣಕ್ಕಾಗಿ ಮಾರಾಮಾರಿ ನಡೆದಿದೆ.

ಈ ವೇಳೆ ಹೊಟೇಲ್ ಗೆ ನುಗ್ಗಿದ ತಂಡ ಇಬ್ಬರು ಸಿಬ್ಬಂದಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದೆ. ಗುಂಡಿನ ದಾಳಿ ವೇಳೆ ಒಂದು ಗುಂಡು ಹೊಟೇಲ್ ಸಿಬ್ಬಂದಿಯೊಬ್ಬರಿಗೆ ತಗುಲಿದ್ದು, ಅವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಹೊಟೇಲ್ ನ ಗಾಜು, ಪೀಠೋಪಕರಣಗಳು ಧ್ವಂಸಗೊಂಡಿದೆ.

ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆಲವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Comments are closed.