ಕರಾವಳಿ

ಭೂಗತಪಾತಕಿ ವಿಕ್ಕಿಶೆಟ್ಟಿ ಸಹಚರನಿಗೆ ಎನ್‌ಕೌಂಟರ್ ಭೀತಿ : ಜಡ್ಜ್‌ಗೆ ಶರಣ್‌ ಬರೆದ ಪತ್ರ ವೈರಲ್

Pinterest LinkedIn Tumblr

ಮಂಗಳೂರು, ಆಕ್ಟೋಬರ್.30: ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿರುವ ಮಂಗಳೂರಿನ ರೌಡಿಶೀಟರ್ ಆಕಾಶಭವನ ಶರಣ್‌ ಅಲಿಯಾಸ್ ಶರಣ್ ಪೂಜಾರಿಗೆ ಎನ್‌ಕೌಂಟರ್ ಭೀತಿ ಎದುರಾಗಿದ್ದು, ಈ ಬಗ್ಗೆ ಶರಣ್ ನ್ಯಾಯಾಧೀಶರಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟ ರೌಡಿಶೀಟರ್ ಆಕಾಶಭವನ ಶರಣ್‌ಗೆ ಇದೀಗ ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆ ತಂದಾಗ ಎನ್‌ಕೌಂಟರ್‌ ಮಾಡುತ್ತಾರೆ ಎಂಬ ಭೀತಿ ಉಂಟಾಗಿದೆ.

ಈ ಬಗ್ಗೆ ಆಕಾಶಭವನ ಶರಣ್‌ ‘ನನ್ನ ಜೀವಕ್ಕೆ ಅಪಾಯವಿದೆ. ವಿಚಾರಣೆಯಿಂದ ವಿನಾಯಿತಿ ನೀಡಿ’ ಎಂದು ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು,ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೌಡಿ ಶೀಟರ್, ತುಳು ಚಿತ್ರನಟ ಸುರೇಂದ್ರ ಭಂಡಾರಿ ಬಂಟ್ವಾಳ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಶರಣ್‌ ಅಲಿಯಾಸ್ ಶರಣ್ ಪೂಜಾರಿಯನ್ನು ವಿಚಾರಣೆಗೊಳಪಡಿಸಲಿರುವ ಹಿನ್ನೆಲೆಯಲ್ಲಿ ಬಾಡಿ ವಾರಂಟ್‌ ಪಡೆದು ಬಂಟ್ವಾಳ ಪೊಲೀಸರು ಆತನನ್ನು ವಿಚಾರಣೆಗೆ ಕರೆತರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸಂದರ್ಭದಲ್ಲಿ ತನ್ನನ್ನು ಎನ್‌ಕೌಂಟರ್‌ ಮಾಡುವ ಯೋಜನೆ ಇದೆ ಎಂಬ ಭಯದಿಂದ ಶರಣ್ ಈ ಪತ್ರ ಬರೆದಿರ ಬಹುದು ಎನ್ನಲಾಗಿದೆ.

Comments are closed.