ಕರಾವಳಿ

ವೈಶ್ಯ ಸಮಾಜದ ಸುಮಾರು 71 ಮಕ್ಕಳಿಗೆ ಸ್ಕಾಲರ್‌ಶಿಪ್ ಹಾಗೂ ಪುಸ್ತಕ ವಿತರಣೆ

Pinterest LinkedIn Tumblr

ಮಂಗಳೂರು: ನಗರದ ಕೊಡಿಯಾಲ್ ಬೈಲ್ ನ ವೈಶ್ಯಎಜುಕೇಷನ್ ಸೊಸೈಟಿಯ ವತಿಯಿಂದ ವೈಶ್ಯ ಸಮಾಜದ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ಮಂಗಳೂರಿನ ಪ್ರಥಮ ಪ್ರಜೆ ದಿವಾಕರ್ ಪಾಂಡೇಶ್ವರ್ ರವರು ಸುಮಾರು 71 ಮಂದಿ ಮಕ್ಕಳಿಗೆ ರೂಪಾಯಿ 1,90000 ಪುಸ್ತಕ ಮತ್ತು ಸುಮಾರು 1,00000 ರೂಪಾಯಿ ಮೊತ್ತದ ಸ್ಕಾಲರ್‌ಶಿಪ್ ವಿತರಣೆ ಮಾಡಿದರು.

ನಂತರ ಮಾತನಾಡುತ್ತ ವೈಶ್ಯಎಜುಕೇಷನ್ ಸೊಸೈಟಿಯ ಈ ಕಾರ್ಯಕ್ರಮವನ್ನು ಶ್ಲಾಘಿಸಿ,ಪ್ರಸಕ್ತ ಸಂಧರ್ಭದಲ್ಲಿ ಮಕ್ಕಳು ಮತ್ತು ಸಮಾಜ ಬಾಂಧವರು ಇಂತಹ ಕಾರ್ಯಕ್ರಮಗಳ ಸದುಉದ್ದೇಶವನ್ನು ಪಡೆದು ಉಪಯೋಗಿಸಿ ಕೊಳ್ಳಬೇಕು ಜೊತೆಗೆ ಮುಂದೆ ತಾವು ಕಲಿತು ದೊಡ್ಡವರಾದ ಮೇಲೆ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜಕ್ಕೆ ತಮ್ಮ ಋಣವನ್ನು ತೀರಿಸಬೇಕು ಎಂದು ಕಿವಿ ಮಾತು ಹೇಳಿದರು.

ಇದೆ ಸಂಧರ್ಭ ದಲ್ಲಿ ಪಿ.ಯು.ಸಿ. ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪಿ.ವಿ.ಎಸ್ ಬೀಡಿ ಸಂಸ್ಥೆಯ ವತಿಯಿಂದ ನೀಡಲಾಗುವ ಸ್ಕಾಲರ್‌ಶಿಪ್ ಅನ್ನು ಸಹ ನೀಡಲಾಯಿತು.

ಮತ್ತೋರ್ವ ಅಥಿತಿಯಾಗಿ ಆಗಮಿಸಿದ್ದ ದ.ಕ ಜಿಲ್ಲಾ ಬಿಜೆ ಪಿ ಕಾರ್ಯಕಾರಿಣಿಯ ಸದಸ್ಯರಾದ ಸಂಜಯ ಪ್ರಭುರವರು ಮಾತನಾಡಿ, ವೈಶ್ಯಎಜುಕೇಷನ್ ಸೊಸೈಟಿಯ ವತಿಯಿಂದ ನೀಡಲಾಗುವ ಸಹಾಯವನ್ನು ಸದುಪಯೋಗ ಪಡಿಸಿ ಕೊಂಡು ತಮ್ಮ ಉನ್ನತ ಶಿಕ್ಷಣದ ನಂತರ ಇನ್ನಷ್ಟು ಸಮಾಜ ಮುಖಿ ಕಾರ್ಯಗಳನ್ನು ನಡೆಸಲು ಚಿಂತಿಸಬೇಕು. ಜೊತೆಗೆ ಸಮಾಜಕ್ಕೆ ತಮ್ಮ ಕೈಯಲ್ಲಿ ಸಾಧ್ಯವಾಗುವಷ್ಟು ಮಟ್ಟಿಗೆ ಸೇವೆ ಸಲ್ಲಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಾಜ ಭಾಂಧವರಿಗೆ ದಾನಿಗಳು ನೀಡಿದ ಮಾಸ್ಕ ಮತ್ತು ಇಮ್ಮ್ಯೂನಿಟಿ ಬೂಸ್ಟರ್ ಮಾತ್ರೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವೈಶ್ಯಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಶ್ರೀನಿವಾಸ ಪುಂಡಲೀಕ ಶೇಟ್,ತ್ರಿವೇಣಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶಾಲಿನಿ ಪ್ರಶಾಂತ್ ಸುವರ್ಣ, ಪುರೋಹಿತರಾದ ಗೋವರ್ಧನ್ ಭಟ್ , ಲಯನ್ ಪೂರ್ಣಿಮಾ ಅಶೋಕ್ ರಾವ್ , ಮತ್ತು ಸಂಸ್ಥೆಯ ಸದಸ್ಯರು ಉಪಸ್ಥಿತ ರಿದ್ದರು .

ವಿನಾಯಕ್ ಶೇಟ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Comments are closed.