ಕರಾವಳಿ

ಮೆಡಿಕಲ್ ಸೀಟು ಪಡೆಯುವುದು ಹೇಗೆ? : ನಾಳೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ

Pinterest LinkedIn Tumblr

ಮಂಗಳೂರು, ಆಕ್ಟೋಬರ್.20: ಯುಜಿ ನೀಟ್ 2020 ಫಲಿತಾಂಶ ಬಂದಿದೆ. ಮುಂದೇನು? ಎಂಬುದು ವಿದ್ಯಾರ್ಥಿಗಳು ಮತ್ತು ಪಾಲಕರ ಗೊಂದಲ. ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತು ಮೆಡಿಕಲ್ ಕೌನ್ಸಿಲಿಂಗ್ ಕಮಿಟಿ (MCC)ಯ ನಿಯಮ, ಹಂತ ಮತ್ತು ವಿಧಾನಗಳನ್ನು ವಿವರಿಸುವ ಶಿಬಿರವನ್ನು ಈ ವರ್ಷ ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿ ಈ ಹಿಂದೆ ಎರಡು ಬಾರಿ ಆಯೋಜಿಸಿದೆ.

3ನೇ ಶಿಬಿರವು ಬುಧವಾರ (ಅ.21, 2020) ಬೆಳಗ್ಗೆ 11ಕ್ಕೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತ ಸಮೀಪದ ನೆಲ್ಲಿಕಾಯಿ ರಸ್ತೆ, ಅಲ್ ರಹಬಾ ಪ್ಲಾಝಾದಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದ್ದು, ನೀಟ್/ಸಿಇಟಿ/ಎಂಸಿಸಿ ಕೌನ್ಸಿಲಿಂಗ್‍ ನ ವಿಧಾನ, ದಾಖಲೆಗಳ ಪರಿಶೀಲನೆ, ಬೇಕಾಗಿರುವ ಅಗತ್ಯ ದಾಖಲೆಗಳು, ಸೀಟುಗಳ ಆಯ್ಕೆ ಪ್ರಕಿೃಯೆ ಮತ್ತು ಪಿಯುಸಿ ಬಳಿಕ ಕಲಿಕೆಗಿರುವ ಅವಕಾಶಗಳ ಕುರಿತಂತೆ ಮಾಹಿತಿ ನೀಡಲಾಗುವುದು.

ಕೋವಿಡ್ ಹಿನ್ನೆಲೆಯಲ್ಲಿ ಸೀಮಿತ ವಿದ್ಯಾರ್ಥಿಗಳು ಮತ್ತು ಪಾಲಕರ ತಂಡಕ್ಕೆ ಮಾತ್ರ ಶಿಬಿರದಲ್ಲಿ ಭಾಗವಹಿಸುವ ಅವಕಾಶವಿದ್ದು, ನೋಂದಾವಣೆ ಕಡ್ಡಾಯ. ಆಸಕ್ತರು ಗೂಗಲ್ ಫಾರ್ಮ್ rb.gy/vj9nqe ಭರ್ತಿ ಮಾಡಿ ಅಥವಾ ಮೊ.ಸಂ.9845054191ಗೆ ಕರೆಮಾಡಿ, ನೋಂದಾವಣೆ ಮಾಡಿಕೊಳ್ಳಬೇಕಾಗಿದೆ.

Comments are closed.