
ಮಂಗಳೂರು : ಜೇಸಿಐ ಮುಂಡ್ಕೂರು ಭಾರ್ಗವದ ಜೇಸಿ ಗಿರೀಶ್ ಆಚಾರ್ಯ ನೇತೃತ್ವದ ಜೇಸಿ ಸಪ್ತಾಹ ಸಪ್ತ ಲಹರಿ ಸಮಾರೋಪ ಸಮಾರಂಭ ಮುಂಡ್ಕೂರಿನ ಸಪಳಿಗ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾರತೀಯ ಜೇಸಿಸ್ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿಐ ಸೆನೆಟರ್ ಜೇಸಿ ಸಂದೀಪ್ ಕುಮಾರ್, ದ.ಕ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ ಕೆ. ಪಿ ಸುಚರಿತ ಶೆಟ್ಟಿ, ಉದ್ಯಮಿ ಜಿನೋಜಿ ರಾವ್, ಘಟಕದ ಪೂರ್ವಾಧ್ಯಕ್ಷರಾದ ಸುರೇಂದ್ರ ಭಟ್, ಗಿರೀಶ್ ಎಸ್ ಪಿ, ರಮ್ಯಾ ಅರುಣ್ ರಾವ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಸಪ್ತಾಹದ ಮಹಾ ನಿರ್ದೇಶಕಿ ಪ್ರತಿಮಾ ಶೆಟ್ಟಿ, ಜೇಸಿರೇಟ್ ಕಾರ್ಯಾಧ್ಯಕ್ಷೆ ವಿಜಯಲಕ್ಷ್ಮೀ, ಜೂನಿಯರ್ ಜೇಸಿ ಕಾರ್ಯಾಧ್ಯಕ್ಷ ಕೆ ಪಿ ಮಿಲನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಸಿಐನ ವಲಯ 15 ರ ವಲಯಾಧ್ಯಕ್ಷ ಜೇಸಿ ಕಾರ್ತಿಕೇಯ ಮಧ್ಯಸ್ಥ, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ಶೇಷಗಿರಿ ನಾಯಕ್, ಮುಂಡ್ಕೂರು – ಕಡಂದಲೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲl ಅಶೋಕ್ ಶೆಟ್ಟಿ, ಪೂರ್ವ ವಲಯಾಧ್ಯಕ್ಷ ಜೇಸಿಐ ಪಿಪಿಪಿ ರಾಕೇಶ್ ಕುಂಜೂರು ದಂಪತಿ, ಘಟಕದ ಪೂರ್ವಾಧ್ಯಕ್ಷರಾದ ವೆಂಕಟೇಶ್ ಪೂಜಾರಿ, ಅರುಣ್ ರಾವ್, ಸುಧಾಕರ್ ಪೊಸ್ರಾಲ್, ಶಿವರಾಮ್ ಸಪಳಿಗ, ಯಶವಂತ್ ಆಚಾರ್ಯ, ಅರುಣಾ ಕುಲಾಲ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಘಟಕದ ಉಪಾಧ್ಯಕ್ಷರಾದ ಅಶ್ವಿನಿ, ಸದಸ್ಯರಾದ ಸೌಮ್ಯಾ ವೆಂಕಟೇಶ್, ತ್ರಿವೇಣಿ, ಜೆಜೆಸಿ ಅಮೂಲ್ಯ ಉಪಸ್ಥಿತರಿದ್ದರು.
ಈ ಸಂದರ್ಭ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಸಂದೀಪ್ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಷ್ಠಿತ ಕಮಲ ಪತ್ರ ಪುರಸ್ಕಾರವನ್ನು ಘಟಕದ ಪೂರ್ವಾಧ್ಯಕ್ಷರಾದ ದೇವಪ್ಪ ಸಪಳಿಗರವರಿಗೆ ನೀಡಿ ಗೌರವಿಸಲಾಯಿತು. ಕಲಾ ಪುರಸ್ಕಾರವನ್ನು ಪ್ರಬುದ್ಧ ರಂಗ ಕಲಾವಿದರಾದ ಹರಿಪ್ರಸಾದ್ ನಂದಳಿಕೆಯವರಿಗೆ ನೀಡಿ ಸನ್ಮಾನಿಸಲಾಯಿತು.
ಶಿಕ್ಷಣ ಕ್ಷೇತ್ರದ ಸಾಧಕರಾದ ಅಮೂಲ್ಯ ಹಾಗೂ ಸಮೀಕ್ಷಾ ಮತ್ತು ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಘಟಕದ ಶಿಕ್ಷಕ ವೃಂದದವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.
ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ವಿಜೇತರಿಗೆ ಬಹುಮಾನ ನೀಡಲಾಯಿತು. ಜೇಸಿಯೇತರ ಬಂಧುಗಳು ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವರದಿ : ಅರುಣಾ ಕುಲಾಲ್, ಉಳೆಪಾಡಿ
Comments are closed.