ಕರಾವಳಿ

ಛತ್ರಪತಿ ಶಿವಾಜಿ ಮಹಾರಾಜರಿಗೆ ‘ಉಗ್ರಗಾಮಿ ಹಿಂದುತ್ವದ ಪ್ರೀತಿಯ ಸಂಕೇತ’ ಎಂದು ಕರೆದು ಅವಮಾನ : ‘ದ ವಾಯರ್’ನ ಸಂಪಾದಕರು ಹಾಗೂ ಮುಖ್ಯಸ್ಥರ ವಿರುದ್ಧ ಪೊಲೀಸರಿಗೆ ದೂರು !

Pinterest LinkedIn Tumblr

‘ದ ವಾಯರ್’ ಈ ಆನ್‌ಲೈನ್ ನ್ಯೂಸ್ ಪೋರ್ಟಲ್‌ನಲ್ಲಿ ಅಕ್ಟೋಬರ್ 8 ರಂದು By Attacking the Mughals, Adityanath Is Erasing the History of His Own Nath Samprady’ ಈ ಶೀರ್ಷಿಕೆಯಲ್ಲಿ ಪ್ರಕಟಿಸಲಾದ ಹಾಗೂ ಕ್ರಿಸ್ಟೀನ್ ಮಾರೆವಾ ಕಾರವೊಸ್ಕೀ ಈ ಮಹಿಳಾ ಪತ್ರಕರ್ತೆಯು ಬರೆದ ಒಂದು ಲೇಖನದಲ್ಲಿ ಛತ್ರಪತಿ ಶಿವಾಜಿ ಮಾಹಾರಾಜರ ಘೋರ ಅವಮಾನ ಮಾಡಿದ್ದಾರೆ.

ಉತ್ತರ ಪ್ರದೇಶದ ಮಾ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ‘ಮೊಗಲ್ ಮ್ಯೂಸಿಯಮ್’ನ ಹೆಸರನ್ನು ಬದಲಾಯಿಸಿ ‘ಛತ್ರಪತಿ ಶಿವಾಜಿ ಮಹಾರಾಜ ಮ್ಯೂಸಿಯಮ್’ ಮಾಡಲಾಗುವುದು ಎಂದು ಘೋಷಿಸಿದರು, ಈ ಬಗ್ಗೆ ಟೀಕಿಸಿ ಬರೆದಿದ್ದ ಈ ಲೇಖನದಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜರೆಂದರೆ ಹಿಂದೂ ರಾಷ್ಟ್ರವಾದದ ಉಗ್ರಗಾಮಿ ಹಿಂದುತ್ವದ ಜನಪ್ರಿಯದ ಪ್ರತೀಕ’ ಎಂದು ಹೇಳಲಾಗಿದೆ,

ಈ ಲೇಖನವು ಅತ್ಯಂತ ಖಂಡನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿಯು ಇದನ್ನು ತೀವ್ರವಾಗಿ ಖಂಡಿಸಿದೆ. ಇಡೀ ಹಿಂದೂ ಸಮಾಜಕ್ಕೆ ದೇವರ ಸಮಾನವಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಘೋರ ಅವಮಾನ ಮಾಡುವ ‘ದ ವಾಯರ್’ ಈ ನ್ಯೂಸ್ ಪೋರ್ಟಲ್‌ನ ಸಂಪಾದಕರು, ಮುಖ್ಯಸ್ಥರು ಹಾಗೂ ಪತ್ರಕರ್ತರ ಮೇಲೆ ಕೂಡಲೇ ದೂರನ್ನು ದಾಖಲಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆಯವರು ಒತ್ತಾಯಿಸಿದ್ದಾರೆ.

ಶ್ರೀ. ಶಿಂದೆಯವರು ಮಾತನಾಡುತ್ತಾ, ಇದರ ವಿರುದ್ಧ ಮುಂಬಯಿಯ ವಿಕ್ರೋಲಿಯಲ್ಲಿ ಶ್ರೀ. ಪ್ರಭಾಕರ ಭೋಸಲೆಯವರು, ಅಮರಾವತಿಯಲ್ಲಿ ಶ್ರೀ. ರೋಶನ ಮುಳೆ ಇವರು ಹಾಗೂ ರಾಯಗಡದಲ್ಲಿ ಶ್ರೀ. ರೋಹಿದಾಸ ಶೆವಡೆಯವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.

ಈ ದೂರಿನಲ್ಲಿ ‘ದ ವಯರ್’ನ ಸಂಪಾದಕ ಸಿದ್ಧಾರ್ಥ ವರದರಾಜನ್, ಸಿದ್ಧಾರ್ಥ ಭಾಟಿಯಾ, ಎಮ್.ಕೆ. ವೇಣು ಹಾಗೂ ಲೇಖಕಿ ಕ್ರಿಸ್ಟೀನ್ ಮಾರೆವಾ ಕಾರವೊಸ್ಕೀಯವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 153 ಅ, 295 ಅ ಹಾಗೂ 34 ರಂತೆ ಅಪರಾಧವನ್ನು ದಾಖಲಿಸಬೇಕು ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಎಂದು ಹೇಳಲಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರ ಯಾವುದೇ ರೀತಿಯಲ್ಲಿ ಮಾಡಿದ ಅವಮಾನವನ್ನು ಹಿಂದೂ ಸಮಾಜವು ಎಂದಿಗೂ ಸಹಿಸುವುದಿಲ್ಲ. ‘ದ ವಾಯರ್’ನ ಸಂಪಾದಕ ಸಿದ್ಧಾರ್ಥ ವರದರಾಜನ್ ಇವರು ಈ ಪ್ರಕರಣದಲ್ಲಿ ತಕ್ಷಣ ಕ್ಷಮೆಯಾಚಿಸಬೇಕು ಮತ್ತು ಈ ವಾರ್ತೆಯನ್ನು ಹಿಂಪಡೆಯಬೇಕು ಹಾಗೂ ಇಡೀ ಹಿಂದೂ ಸಮಾಜಕ್ಕೆ ಸಾರ್ವಜನಿಕವಾಗಿ ಕ್ಷಮಾಪಣೆಯನ್ನು ಪ್ರಕಟಿಸಬೇಕು. ಇಲ್ಲದಿದ್ದರೆ ಈ ಪ್ರಕರಣಕ್ಕಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುತ್ತೇವೆ ಎಂದು ಶ್ರೀ  ಶಿಂದೆಯವರು ಈ ಸಮಯದಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ವಾರ್ತೆಯ ಲಿಂಕ್ – https://thewire.in/communalism/by-attacking-the-mughals-adityanath-is-erasing-the-history-of-his-own-

Comments are closed.