
ಮಂಗಳೂರು, ಆಕ್ಟೋಬರ್.14: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದರು ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ಇದರ ಸಹಕಾರದಿಂದ ಒಕ್ಟೋಬರ್ 14 ಬುಧವಾರದಿಂದ 20 ಮಂಗಳರವಾರದವರೆಗೆ ಪ್ರತಿ ದಿನ ಸಂಜೆ 4.30 ಕ್ಕೆ ಅಕಾಡೆಮಿ ಸಿರಿಚಾವಡಿಯಲ್ಲಿ ‘ತುಳು ನಾಟಕ ಪರ್ಬ’ ವನ್ನು ಆಯೋಜಿಸಲಾಗಿದೆ.
ದಿನಾಂಕ: 14 ರಂದು ಲೀಲಾವತಿ ಪೊಸಲಾಯಿ ಸಾರಥ್ಯ ಸಿಂಧೂರ ಕಲಾವಿದರು ಕಾರ್ಲ ಇವರ ‘ಪನೊಡಿತ್ತ್ಂಡ್ ಸಾರಿ’, 15ರಂದು ರಮೇಶ್ ಎಮ್. ಸಂಗಮ ಕಲಾವಿದರು ಉಜಿರೆ ಇವರ ‘ತೂಯೆರೆ ಬರ್ಪೆರ್’, 16ರಂದು ಶ್ರೀನಿವಾಸ್ ಕುಲಾಲ್ ಚಾರ್ಮಾಡಿ ಪಂಚಶ್ರೀ ಕಲಾವಿದರು ಚಾರ್ಮಾಡಿ ಇವರ ‘ಏತುಂಡ ಆತೆ’, 17ರಂದು ಅನ್ನಪೂರ್ಣೇಶ್ವರಿ ಕಲಾತಂಡ ಇಂಚರ ಇವರ ‘ಮದಿಮಾಲ್’, 18ರಂದು ಶರತ್ ಆಳ್ವ ಕೂರೇಲು ಬೊಳ್ಳು ಬೊಲ್ಪು ಕಲಾವಿದರು ಪುತ್ತೂರು ಇವರ ‘ಕಾಸ್ದ ಕಸರತ್ತ್’, 19ರಂದು ಪುರಲ್ದಪ್ಪೆನ ಮೋಕೆದ ಕಲಾವಿದರು ಪೊಳಲಿ ಇವರ ‘ಈ ಪನ್ಪನ ಯಾನ್ ಪನೊಡ’, 20ರಂದು ಕಲಾಸವ್ಯಸಾಚಿ ಪ್ರಶಾಂತ್ ಸಿ ಕೆ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದರು ಇವರ’ಸತ್ಯೊದ ಬಿರುವೆರ್’ ಈ ನಾಟಕಗಳನ್ನು ತುಳುನಾಡಿನ ಸಾಧಕರು ಒಟ್ಟಿಗೆ ಸೇರಿ ಅಭಿನಯಿಸಿ ಪ್ರದರ್ಶಿಸಲಿರುವರು.
ದಿನಾಂಕ 20-10-2020ರಂದು ನಾಟಕ ಪರ್ಬದ ಸಮಾರೋಪ ಸಮಾರಂಭ ನಡೆಯಲಿರುವುದು. ಸರಕಾರದ ನಿಯಮಕ್ಕನುಸಾರ ನಾಟಕದ ಅಗತ್ಯ ಕಲಾವಿದರ ವಿನಃ ಬೇರೆ ಯಾರಿಗೂ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶವಿಲ್ಲ. ಕಾರ್ಯಕ್ರಮವು ನಮ್ಮ ಟಿ.ವಿ, ಫೇಸ್ಬುಕ್ನಲ್ಲಿ ನೇರಪ್ರಸಾರವಾಗಲಿರುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್. ಜಿ ಇವರು ತಿಳಿಸಿದ್ದಾರೆ.
Comments are closed.