ಕರಾವಳಿ

ಆಕ್ಟೋಬರ್.12ರಿಂದ ಮುಂಬೈ- ಮಂಗಳೂರು- ಮುಂಬೈ ವಿಮಾನ ಸೇವೆ ಮತ್ತೆ ಆರಂಭ

Pinterest LinkedIn Tumblr

ಮಂಗಳೂರು: ಕೋವಿಡ್ ಸೋಂಕು ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಸ್ಥಗಿತಗೊಂಡಿದ್ದ ಮಂಗಳೂರು- ಮುಂಬೈ ನಡುವಿನ ಸಾರ್ವಜನಿಕ ಸ್ವಾಮ್ಯದ ಏರ್ ಇಂಡಿಯಾ ವಿಮಾನ ಸೇವೆ ಮತ್ತೆ ಆರಂಭಗೊಳ್ಳಲ್ಲಿದೆ.

ಆಕ್ಟೋಬರ್.12, ಸೋಮವಾರದಿಂದ ಮುಂಬೈ-ಮಂಗಳೂರು ಮತ್ತು ಮಂಗಳೂರು-ಮುಂಬೈ ನಡುವೆ ಸಾರ್ವಜನಿಕ ಸ್ವಾಮ್ಯದ ಏರ್ ಇಂಡಿಯಾ ತನ್ನ ನೇರ ವಿಮಾನ ಸೇವೆಯನ್ನು ಪುನರಾರಂಭಿಸಲಿದೆ ಎಂದು ಸಂಸ್ಥೆಯ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸೇವೆಯು ವಾರದಲ್ಲಿ ನಾಲ್ಕು ದಿನಗಳು ಅಂದರೆ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಲಭ್ಯವಿರಲಿದೆ. ಏರ್ ಇಂಡಿಯಾ ವಿಮಾನ ಮುಂಬೈನಿಂದ ಬೆಳಿಗ್ಗೆ 10.15 ಗಂಟೆಗೆ ಹೊರಟು ಮಧ್ಯಾಹ್ನ 12-00 ಕ್ಕೆ ಇಲ್ಲಿಗೆ ಆಗಮಿಸಲಿದೆ.ವಾಪಸ್‍ ಮಾರ್ಗದಲ್ಲಿ ಇದೇ ವಿಮಾನ ಮಧ್ಯಾಹ್ನ 12.40 ಗಂಟೆಗೆ ಹೊರಟು ಮುಂಬೈಗೆ ಮಧ್ಯಾಹ್ನ 2.20ಕ್ಕೆ ತಲುಪಲಿದೆ.

ಕೋವಿಡ್ ಸೋಂಕು ತಡೆಗೆ ಜಾರಿಗೊಳಿಸಲಾದ ಲಾಕ್‍ ಡೌನ್‍ನಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಕಳೆದ ಮಾರ್ಚ್ ನಿಂದ ಸ್ಥಗಿತಗೊಂಡಿದ್ದು, ಇದೀಗ ದೇಶೀಯ ಸೇವೆಗಳು (ಏರ್ ಇಂಡಿಯಾ ಮತ್ತು ಖಾಸಗಿ ವಿಮಾನಯಾನ ಕಂಪನೆಗಳು) ಹಂತ-ಹಂತವಾಗಿ ಪುನರಾರಂಭಗೊಳ್ಳುತ್ತಿವೆ.

ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಆರಂಭಗೊಳ್ಳುವ ಬಗ್ಗೆ ಕೂಡ ಚಿಂತಿಸಲಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.