ಕರಾವಳಿ

ಗಾಂಜಾ ಸೇವಿಸುತ್ತಿದ್ದ 7ಮಂದಿಯ ಬಂಧನ : ಎಮ್.ಡಿ.ಎಮ್.ಎ ಡ್ರಗ್ಸ್, ಹಾಗೂ ಗಾಂಜಾ ವಶ

Pinterest LinkedIn Tumblr

ಮಂಗಳೂರು ಅಕ್ಟೋಬರ್.10 : ಮಾದಕ ಪಧಾರ್ಥದ ವಿರುದ್ಧ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ವಲಯ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ ಒಟ್ಟು 1.50 ಗ್ರಾಂ ಎಮ್.ಡಿ.ಎಮ್.ಎ ಡ್ರಗ್ಸ್, 100 ಗ್ರಾಂ ಗಾಂಜಾ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮಾತ್ರವಲ್ಲದೇ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳಾದ ಅಲನ್, ವಿವೇಕ್, ಅಮೃತಾ ವಾಸ್, ಸಚಿನ್, ರೋಹನ್, ನಭಾ ಎಂಬವರನ್ನು ಬಂಧಿಸಿ ಒಟ್ಟು 7 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಮಂಗಳೂರು ದಕ್ಷಿಣ ವಲಯ-1 ರ ಅಬಕಾರಿ ನಿರೀಕ್ಷರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಇವರ ನಿರ್ದೇಶನದಂತೆ ಹಾಗೂ ಅಬಕಾರಿ ಅಧೀಕ್ಷಕರು ಮತ್ತು ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದ ಮೇರೆಗೆ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ವಲಯ-1, ಕಚೇರಿಯ ಅಬಕಾರಿ ನಿರೀಕ್ಷಕಿ ಸೀಮಾ, ಅಬಕಾರಿ ಉಪನಿರೀಕ್ಷಕಿ ಪ್ರತಿಭಾ ಜಿ, ಕಮಲ ಹೆಚ್ ಎನ್ ಹಾಗೂ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸುನಿಲ್ ಬೈಂದೂರ್ ಉಮೇಶ್ ಹೆಚ್, ಕುಮಾರ್, ವಿನಿತಾ, ಸಂದೀಪ್ ಕುಮಾರ್ ಮತ್ತು ಮನ್‍ಮೋಹನ್ ರವರ ತಂಡವು ಭಾಗವಹಿಸಿದ್ದವು.

Comments are closed.