
ದೇಶದಲ್ಲಿ ದಿನದಿಂದ ದಿನಕ್ಕೆ ಏರಿಳಿಕೆ ಆಗುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಯ ದರಗಳಿಂದ ಚಿನ್ನಾಭರಣ ಪ್ರಿಯರಿಗೆ ಆತಂಕ ಶುರುವಾಗಿದೆ. ಸಾಲು ಸಾಲು ಹಬ್ಬಗಳು ಬರುತ್ತಿರುವ ಈ ಸಂದರ್ಭ ದಲ್ಲಿ ಚಿನ್ನ ಕೊಳ್ಳಬೇಕೇ ಬೇಡವೇ ಎಂಬ ಗೊಂದಲ ಉಂಟಾಗಿದೆ.
ಹಬ್ಬಗಳ ಸಂದರ್ಭದಲ್ಲಿ ದೊಡ್ಡ ದೊಡ್ಡ ಶೋರೂಂಗಳಲ್ಲಿ ಹೆಚ್ಚಿನ ವಸ್ತುಗಳ ಮೇಲೆ ರಿಯಾಯಿತಿ ಘೋಷಿಸುವುದು ಸಾಮಾನ್ಯ. ಆದರೆ ಚಿನ್ನಾಭರಣಗಳ ಮೇಲೆ ಕೆಲವೇ ಕೆಲವು ಪ್ರತಿಷ್ಠಿತ ಸ್ವರ್ಣಾಭರಣಗಳು ಮಾತ್ರ ರಿಯಾಯಿತಿ ಘೋಷಿಸುತ್ತದೆ. ಅದೂ ದೊಡ್ಡ ಮೊತ್ತದ ಚಿನ್ನಾಭರಣ ಕೊಂಡರೇ ಮಾತ್ರ. ಇದರಿಂದ ಸಾಮಾನ್ಯ ಜನರಿಗೆ ಯಾವೂದೇ ಪ್ರಯೋಜವಾಗುವುದಿಲ್ಲ.
ಈ ನಡುವೆ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯ ದರದಲ್ಲಿ ಏರಿಕೆ ಇಳಿಕೆಯಾಗುತ್ತಿರುತ್ತದೆ. ಇದರಿಂದ ಗ್ರಾಹಕರಿಗೆ ಯಾವ ಸಂದರ್ಭದಲ್ಲಿ ಚಿನ್ನಕೊಳ್ಳಬೇಕು ಎಂಬ ಸಂಕಟ ಎದುರಾಗಿದೆ. ಚಿನ್ನ ಖರೀದಿಸುವ ಸೂಕ್ತ ಸಂದರ್ಭ ಯಾವೂದು ಎಂಬ ನಿರೀಕ್ಷೆಯಲ್ಲಿದ್ದ ಸ್ವರ್ಣಾಭರಣ ಪ್ರಿಯ ಗ್ರಾಹಕರು ಹಬ್ಬಗಳ ದಿನಗಳನ್ನು ಎದುರು ನೋಡುವಂತಾಗಿದೆ.
ಗುರುವಾರ ದೇಶದಲ್ಲಿದ್ದ ಚಿನ್ನ ಬೆಳ್ಳಿಯ ದರ :
ಗುರುವಾರ ದೇಶದಲ್ಲಿ ಗ್ರಾಂ ಚಿನ್ನದ ಬೆಲೆ 4,941ರೂ ದಾಖಲಾಗಿದೆ. ಇನ್ನು, ಬೆಂಗಳೂರಿನಲ್ಲಿ ಗ್ರಾಂ ಚಿನ್ನದ ದರ ಅಲ್ಪ ಇಳಿಕೆ ಕಂಡಿದ್ದು 4,730ರೂ. ದಾಖಲಾಗಿದೆ. ಇದೇ ರೀತಿ ಕೆಜಿ ಬೆಳ್ಳಿ ಬೆಲೆ ಕೂಡ ಇಳಿದಿದೆ. ಕೆಜಿ ಗೆ 62,210 ರೂ ದಾಖಲಾಗಿದೆ.
ರಾಜಧಾನಿ ದೇಹಲಿಯಲ್ಲಿ 22 ಕ್ಯಾರಟ್ ಚಿನ್ನದ ದರವು 10 ಗ್ರಾಮ್‌ಗೆ 48,910 ರೂ. ಮತ್ತು ಬೆಳ್ಳಿ ದರವು 62,210 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಅಲ್ಪ ಇಳಿಕೆ ಕಂಡು 47,300 ರೂ. ದಾಖಲಾಗಿದೆ. ಇನ್ನು, ಇದೇ ರೀತಿ 1 ಕೆಜಿ ಬೆಳ್ಳಿ ಬೆಲೆ 62,210 ರೂ. ಆಗಿದೆ.
ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 49,410 ರೂಪಾಯಿ ದಾಖಲಾಗಿದೆ. ಇನ್ನು, ಒಂದು ಕೆ.ಜಿ. ಬೆಳ್ಳಿ ದರ 62,210 ರೂಪಾಯಿ ಇದೆ.
ಕೋಲ್ಕತಾದಲ್ಲಿ 10 ಗ್ರಾಂ ಆಭರಣದ ಬೆಲೆ 49,480 ರೂಪಾಯಿ ಮತ್ತು ಬೆಳ್ಳಿ ದರ 62,210 ರೂಪಾಯಿ ಇದೆ. ಚೆನ್ನೈನಲ್ಲಿ ಬಂಗಾರದ ಬೆಲೆ 10 ಗ್ರಾಂಗೆ 48,060 ರೂ ದಾಖಲಾಗಿದೆ. ಒಂದು ಕೆ.ಜಿ. ಬೆಳ್ಳಿ ದರ 62,210 ರೂಪಾಯಿ ಇದೆ.
Comments are closed.