ಕರಾವಳಿ

ಹತ್ರಾಸ್ ದಲಿತ ಯುವತಿಯ ಅತ್ಯಾಚಾರ,ಕೊಲೆ ವಿರುದ್ಧ ಮಹಿಳೆಯರಿಂದ ಆಕ್ರೋಶ ವ್ಯಕ್ತ : ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಆಕ್ಟೊಬರ್.08: ಉತ್ತರಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆಯನ್ನು ಖಂಡಿಸಿ, ಯೋಗಿ ಆದಿತ್ಯನಾಥ ಸರಕಾರದ ಗೂಂಡಾಗಿರಿ ಹಾಗೂ ಫ್ಯಾಸಿಸ್ಟ್ ದಬ್ಬಾಳಿಕೆಯನ್ನು ವಿರೋಧಿಸಿ ನಗರದಲ್ಲಿಂದು (08-10-2020) ದಲಿತ ಹಕ್ಕುಗಳ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆಯ ನೇತ್ರತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಮಹಿಳೆಯರ ಹಾಗೂ ದಲಿತರ ಮೇಲಿನ ದೌರ್ಜನ್ಯವನ್ನು ಕೇಂದ್ರದ ಮೋದಿ ಹಾಗೂ ಉತ್ತರಪ್ರದೇಶದ ಯೋಗಿ ಸರಕಾರ ಪರೋಕ್ಷವಾಗಿ ಸಮರ್ಥಿಸುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶಭರಿತರಾಗಿ ಘೋಷಣೆ ಕೂಗಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ,ದಲಿತ ಹಕ್ಕುಗಳ ಸಮಿತಿಯ ದಕ.ಜಿಲ್ಲಾಧ್ಯಕ್ಷರಾದ ತಿಮ್ಮಯ್ಯ ಕೊಂಚಾಡಿ,ಸಮುದಾಯ ಸಾಂಸ್ಕ್ರತಿಕ ಸಂಘಟನೆಯ ನಾಯಕರಾದ ವಾಸುದೇವ ಉಚ್ಚಿಲ್ ರವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ,ಅಶುಂತ ಡಿಸೋಜ ರವರು ಭಾಗವಹಿಸಿದ್ದರು. ಹೋರಾಟದ ನೇತ್ರತ್ವವನ್ನು ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಕ್ರಷ್ಣ ತಣ್ಣೀರುಬಾವಿ,ರಘುವೀರ್ ಉರ್ವಾಸ್ಟೋರ್,ಸುನೀತಾ, ಬೇಬಿ,ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಜಯಲಕ್ಷ್ಮಿ, ಲೋಲಾಕ್ಷಿ,ಬೇಬಿ ಸೇನವ,ಭವ್ಯ ಮುಚ್ಚೂರು ಮುಂತಾದವರು ವಹಿಸಿದ್ದರು.

 

Comments are closed.