ಕರಾವಳಿ

ಹಿರಿಯ ತುಳು ಸಂಘಟಕ, ತುಳು, ಕನ್ನಡ ಸಾಹಿತಿ ಅತ್ತಾವರ ಶಿವಾನಂದ ಕರ್ಕೇರ ವಿಧಿವಶ

Pinterest LinkedIn Tumblr

ಮಂಗಳೂರು, ಅಕ್ಟೋಬರ್.08 : ಖ್ಯಾತ ತುಳು ಸಂಘಟಕ, ತುಳು,ಕನ್ನಡ ಸಾಹಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಸಿಂಡಿಕೇಟ್ ಬ್ಯಾಂಕ್‌ ನ ನಿವೃತ್ತ ಅಧಿಕಾರಿ ಅತ್ತಾವರ ಶಿವಾನಂದ ಕರ್ಕೇರ ಅವರು ಅಕ್ಟೋಬರ್ 7ರಂದು ಸಂಜೆ ವಿಧಿವಶರಾಗಿದ್ದಾರೆ.

ತುಳು ಅಕಾಡೆಮಿ ಮಾಜಿ ಸದಸ್ಯ ಶಿವಾನಂದ ಕರ್ಕೇರ ಅವರು ತುಳು ಎಂಎ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿದ್ದರು. ಹಾಗೆಯೇ ಸಿಂಡಿಕೇಟ್ ಬ್ಯಾಂಕ್‌ ಹಾಗೂ ನಿವೃತ್ತ ಅಧಿಕಾರಿಯಾಗಿದ್ದರು. ಗೋಕರ್ಣನಾಥ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆಗಿದ್ದರು. ಸ್ವೀಕಾರ್ ಸಾಹಿತ್ಯ- ಸಾಂಸ್ಕೃತಿಕ ಕೂಟದ ಸ್ಥಾಪಕರಾಗಿದ್ದ ಇವರು ಯಕ್ಷಾಂಗಣದ ಸ್ಥಾಪಕ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಖ್ಯಾತ ನಾಟಕ ರಚನೆಗಾರರಾಗಿದ್ದ ಇವರು *ಕಡಲ್* ಕವಿತಾ ಸಂಕಲನ *ಎರು ಮೈಂದೆ* ನಾಟಕ ಗಳಿಗೆ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಹಿರಿಯ ತುಳು ಸಂಘಟಕ, ಸರಳ ಸಜ್ಜನಿಕೆಯ ಸ್ನೇಹ ಜೀವಿ, ತುಳು ಕಾರ್ಯಕ್ರಮಗಳ ಅನುಭವಿ ಸಂಘಟಕ ಅತ್ತಾವರ ಶಿವಾನಂದ ಕರ್ಕೇರ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Comments are closed.