ಕರಾವಳಿ

ಆಡು,ಕುರಿ ಮಾಂಸದೊಂದಿಗೆ ದನದ ಕರುವಿನ ಮಾಂಸ ಬೆರೆಸಿ ಮಾರಾಟ? ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ನಾವೇ ರಸ್ತೆಗಿಳಿಯುತ್ತೇವೆ :ಬಜರಂಗದಳ

Pinterest LinkedIn Tumblr

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ, ಗೋಕಳ್ಳತನ ಅಕ್ರಮ ಗೊಸಾಗಾಟ ಮುಂತಾದ ಗೋ ಮಾಫಿಯಾ ದಂಧೆ ನಡೆಯುತ್ತಿದ್ದು, ಪ್ರತಿನಿತ್ಯ ಅಕ್ರಮ ಗೋಸಾಗಾಟ ವಾಹನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ದನದ ಕರುಗಳು ಪತ್ತೆಯಾಗುತ್ತಿದೆ.

ಈ ಕರುಗಳ ಮಾಂಸವನ್ನು ಆಡು, ಕುರಿಗಳ ಮಾಂಸದೊಂದಿಗೆ ಬೆರೆಸಿ ಕೆಲವು ಮಾಂಸದ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಸಂಶಯ ವ್ಯಕ್ತಪಡಿಸಿ ನಾವು ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.

ಇದನ್ನು ಗಂಭೀರವಾಗಿ ಪರಿಗಣಿಸಿ ತನಿಕೆ ನಡೆಸಿ ಈ ರೀತಿ ನಡೆದಿದ್ದಲ್ಲಿ ಅದನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಂಡು, ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಅವರ ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಬಜರಂಗದಳ ಹಾಗೂ ವಿಶ್ವಹಿಂದ್ ಪರಿಷತ್ ಮನಪಾ ಆಯುಕ್ತರನ್ನು ಆಗ್ರಹಿಸುತ್ತಿರುವುದಾಗಿ ವಿಹಿಂಪ, ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ತಿಳಿಸಿದ್ದಾರೆ.

ಗೋರಕ್ಷಣೆಗಾಗಿ ರಸ್ತೆಗೆ ಇಳಿಯಲು ಸಿದ್ಧವಾಗಿದೆ ಬಜರಂಗದಳ : ಜಿಲ್ಲಾಡಳಿತಕ್ಕೆ ಎಚ್ಚರಿಕೆ

ಹಿಂದುಗಳಿಗೆ ಪೂಜನೀಯವಾಗಿರುವ ಗೋಮಾತೆಗೆ ಈ ರೀತಿ ಹಿಂಸೆ ಕೊಡುವುದು ಹಿಂದುಗಳೆಲ್ಲರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದು ಹಿಂದು ಸಮಾಜದ ಆಕ್ರೋಶ ಸ್ಪೋಟಗೊಳ್ಳುವ ಮೊದಲು ಜಿಲ್ಲಾಡಳಿತ ಎಚ್ಚರಗೊಂಡು ಒಂದೇ ಒಂದು ಗೋವುಗಳ ವಧೆಯಾಗಲೀ, ಅಕ್ರಮ ಗೋಸಾಗಾಟವಾಗಲೀ ಜಿಲ್ಲೆಯಲ್ಲಿ ನಡೆಯದಂತೆ ಕಡಿವಾಣ ಹಾಕದಿದ್ದಲ್ಲಿ ಬಜರಂಗದಳವು ಗೋರಕ್ಷಣೆಗೆ ರಸ್ತೆಗೆ ಇಳಿಯಲಿದ್ದು, ಅಕ್ರಮವನ್ನು ತಡೆಯಲಿದೆ.

ಮುಂದೆ ಈ ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಶರಣ್ ಪಂಪುವೆಲ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Comments are closed.