
ಮಂಗಳೂರು ಅಕ್ಟೋಬರ್ 02: 2020ನೇ ಸಾಲಿನ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನವು ದಕ್ಷಿಣ ಕನ್ನಡ ಜಿಲ್ಲೆಯ 6 ಮೌಲ್ಯಮಾಪನ ಕೇಂದ್ರಗಳಲ್ಲಿ ಅಕ್ಟೋಬರ್ 7 ರಿಂದ ನಡೆಯಲಿದ್ದು, ಮೌಲ್ಯಮಾಪನವು ಸುಸೂತ್ರವಾಗಿ ನಡೆಸಲು ಮತ್ತು ಪಾರದರ್ಶಕತೆಯಿಂದ ನಡೆಸಲು ಹಾಗೂ ಮೌಲ್ಯಮಾಪನ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಕೇಂದ್ರಗಳ 200 ಮೀಟರ್ ಸುತ್ತಮುತ್ತಲಿನ ಪ್ರದೇಶವನ್ನು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ|| ರಾಜೇಂದ್ರ ಕೆ,ವಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.
ಮೌಲ್ಯಮಾಪನ ನಡೆಸುವ ಕೇಂದ್ರಗಳ ವಿವರ ಇಂತಿವೆ:
ಕಪಿತಾನಿಯೋ ಪ್ರೌಢ ಶಾಲೆ, ಕಂಕನಾಡಿ ಮಂಗಳೂರು, ಸೈಂಟ್ ಆಗ್ನೇಸ್ ಪ್ರೌಢ ಶಾಲೆ, ಬೊಂದೇಲ್, ಮಂಗಳೂರು, ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಬೊಂದೇಲ್, ಮಂಗಳೂರು, ಲೇಡಿಹಿಲ್ ವಿಕ್ಟೋರಿಯಾ ಹೆಣ್ಣು ಮಕ್ಕಳ ಪ್ರೌಢ ಶಾಲೆ, ಮಂಗಳೂರು, ಪುದವಾ ಅನುದಾನಿತ ಪ್ರೌಢ ಶಾಲೆ, ನಂತೂರು, ಕೆನರಾ ಬಾಲಕರ ಪ್ರೌಢ ಶಾಲೆ, ಡೊಂಗರಕೇರಿ ಮಂಗಳೂರು ಇಲ್ಲಿ ನಡೆಯಲ್ಲಿದೆ.
Comments are closed.