ಅಂತರಾಷ್ಟ್ರೀಯ

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೂ ಕೊರೋನಾ ಸೋಂಕು ದೃಢ

Pinterest LinkedIn Tumblr

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಅಮೆರಿಕದ ಪ್ರಥಮ ಮಹಿಳೆ  ಮೆಲಾನಿಯಾ ಟ್ರಂಪ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಟ್ರಂಪ್‌ಗೆ 74 ವರ್ಷ ವಯಸ್ಸಾಗಿದೆ.

https://twitter.com/realDonaldTrump/status/1311892190680014849?s=20

ಈ ಕುರಿತು ಸ್ವತಃ ಡೊನಾಲ್ಡ್ ಟ್ರಂಪ್ ಅವರೇ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ‘ಕೋವಿಡ್ ತಪಾಸಣೆಯಲ್ಲಿ ಪಾಸಿಟಿವ್ ಬಂದಿದ್ದು ನಾವಿಬ್ಬರು ಕ್ವಾರೆಂಟೈನ್ ಆಗಲಿದ್ದು ಶೀಘ್ರವೇ ಗುಣಮುಖರಾಗಲಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

https://twitter.com/realDonaldTrump/status/1311859538279239686?s=20

ದಿನದ ಹಿಂದೆ ಟ್ರಂಪ್ ಅವರ ಉನ್ನತ ಸಲಹೆಗಾರರಾದ ಹೋಪ್ ಹಿಕ್ಸ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಕರ್ತವ್ಯದ ವೇಳೆ ಸಣ್ಣ ವಿರಾಮವನ್ನು ಕೂಡ ತೆಗೆದುಕೊಳ್ಳದೆ ತುಂಬಾ ಶ್ರಮಿಸುತ್ತಿದ್ದ ಹೋಪ್ ಹಿಕ್ಸ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದು ನಿಜಕ್ಕೂ ಭಯಾನಕ. ನನ್ನ ಪತ್ನಿ ಮತ್ತು ನಾನು ನಮ್ಮ ಕೋವಿಡ್ ಪರೀಕ್ಷೆ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ. ಈ ಮಧ್ಯೆ, ನಾವು ನಮ್ಮ ಕ್ವಾರಂಟೈನ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದೇವೆಂದು ಕೂಡ ಟ್ರಂಪ್ ಕೆಲವು ಗಂಟೆಗಳ ಮೊದಲಿಗೆ ಬರೆದುಕೊಂಡಿದ್ದರು.

Comments are closed.