ಕರಾವಳಿ

ರಾಜ್ಯದಲ್ಲಿ ಶಾಲಾ ಕಾಲೇಜುಗಳ ಆರಂಭಕ್ಕೆ ಮುಂದಾದ ಸರ್ಕಾರ: ಸಚಿವರು, ಶಾಸಕರಿಗೆ ಪತ್ರ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಬೆಂಗಳೂರು : ರಾಜ್ಯದಲ್ಲಿ ಶೀಘ್ರದಲ್ಲೇ ಶಾಲಾ ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಶಾಲೆ ಆರಂಭ ಮಾಡುವ ಬಗ್ಗೆ ಸಚಿವರು ಮತ್ತು ವಿಧಾನಸಭಾ ಸದಸ್ಯರಿಂದ ಅಭಿಪ್ರಾಯ ಸಂಗ್ರಹ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ದ್ವಿತೀಯ ಪಿಯುಸಿವರೆಗೆ ತರಗತಿಗಳನ್ನು ಯಾವಾಗ ಆರಂಭಿಸಬಹುದು ಮತ್ತು ಯಾವ ತರಗತಿಗಳಿಗೆ ಮೊದಲು ಶಾಲೆ ಆರಂಭಿಸಬಹುದು ಎಂದು ಸಮುದಾಯ ಹಾಗೂ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮುಂದಾಗಿದ್ದಾರೆ. ಈ ಸಂಬಂಧ ಸಚಿವರು, ಶಾಸಕರಿಗೆ ಅಭಿಪ್ರಾಯ ತಿಳಿಸುವಂತೆ ಪತ್ರ ಬರೆದಿದ್ದಾರೆ.

ಅವರು ರಾಜ್ಯದ ಎಲ್ಲಾ ಸಚಿವರು, ಶಾಸಕರಿಗೆ ಪತ್ರ ಬರೆದಿದ್ದು, ಶಾಲೆ ಆರಂಭದ ಬಗ್ಗೆ ಏನೆಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಮುಂದಿನ 2 ದಿನಗಳಲ್ಲಿ ತಮ್ಮ ಸಲಹೆ-ಸೂಚನೆಗಳನ್ನು nimmasuresh2019@gmail.com ಇ-ಮೇಲ್ ಮೂಲಕ ತಿಳಿಸುವಂತೆ ಕೋರಿ ರಾಜ್ಯದ ಸಚಿವರು ಹಾಗೂ ಶಾಸಕರಿಗೆ ಪತ್ರ ಅವರು ಬರೆದಿದ್ದಾರೆ.

ಜನಪ್ರತಿನಿಧಿಗಳಿಂದ ಬರುವ ಸಲಹೆ-ಸೂಚನೆಗಳು ಶೈಕ್ಷಣಿಕವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಲಿದೆ. ಶಿಕ್ಷಣ ಇಲಾಖೆ ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಪುನಾರಂಭಿಸಲು ಅವಶ್ಯಕವಿರುವ ಎಲ್ಲಾ ಪೂರ್ವ ಸಿದ್ಧತೆಗಳು ಹಾಗೂ ಪ್ರಮಾಣಿಕ ಕಾರ್ಯಾಚರಣಾ ವಿಧಾನಗಳನ್ನು ಸಿದ್ಧಪಡಿಸಿದ್ದು, ಮಾರ್ಗಸೂಚಿ ಜೊತೆಗೆ ಸಲಹೆಗಳನ್ನು ಆಧರಿಸಿ ಶಾಲೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Comments are closed.