ಕರಾವಳಿ

ದ.ಕ.ಜಿಲ್ಲೆ : ಕೋವಿಡ್ ಸಂದರ್ಭ ಜನಪರ ಸೇವೆ ಸಲ್ಲಿಸಿದ ಮಹಿಳೆಯರು ಕೂಡಲೇ ಅರ್ಜಿ ಸಲ್ಲಿಸಿ – ಇವರ ಇಲ್ಲಿದೆ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು : “ಮಗಳನ್ನು ಉಳಿಸಿ, ಮಗಳನ್ನು ಓದಿಸಿ” ಕಾರ್ಯಕ್ರಮದಡಿ ಸ್ಥಳೀಯ ಚಾಂಪಿಯನ್‍ ಗಳನ್ನು ಗುರುತಿಸಲಾಗುತ್ತದೆ. ಕೋವಿಡ್-19 ಸಮಯದಲ್ಲಿ ಸ್ವ-ಪ್ರೇರಣೆಯಿಂದ ಉತ್ತಮ ಜನಪರ ಕಾರ್ಯ ನಿರ್ವಹಿಸಿದ ಮಹಿಳೆ ಅಥವಾ ಹೆಣ್ಣು ಮಕ್ಕಳನ್ನು ಸ್ಥಳೀಯ ಚಾಂಪಿಯನ್ ಆಗಿ ಆಯ್ಕೆ ಮಾಡಲಾಗುತ್ತದೆ.

ಕೋವಿಡ್-19 ಸಮಯದಲ್ಲಿ ಬಾಲ್ಯ ವಿವಾಹ ತಡೆಗಟ್ಟಿ ಎಫ್.ಐ.ಆರ್ ದಾಖಲಿಸಿ, ಮನೆ-ಮನೆಗೆ ಉಚಿತವಾಗಿ ಆಹಾರ ವಿತರಣೆ, ಮಾಸ್ಕ್ ತಯಾರಿಸಿ ಉಚಿತವಾಗಿ ವಿತರಣೆ ಮತ್ತು ಕೋವಿಡ್‍ನಿಂದ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಇತ್ಯಾದಿ ಕೆಲಸ-ಕಾರ್ಯವನ್ನು ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆ, ಸ್ತ್ರೀಶಕ್ತಿ ಸದಸ್ಯರು ಸೇರಿದಂತೆ ಯಾವುದೇ ಮಹಿಳೆ ಅರ್ಜಿಯನ್ನು ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ಕೊನೆಯ ದಿನ.

ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿ ನಮೂನೆಗಾಗಿ ಸಂಬಂಧಿಸಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಅಥವಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು ಈ ಕಚೇರಿ, ಹಾಗೂ ದೂರವಾಣಿ ಸಂಖ್ಯೆ: 0824-2451254 ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.