ಅಂತರಾಷ್ಟ್ರೀಯ

ಚಲಿಸುತ್ತಿದ್ದ ಕಾರಿನಲ್ಲಿ ಸೆ#ಕ್ಸ್ ಮಾಡುತ್ತಿದ್ದ ವೇಳೆ ಅಪಘಾತ; ಪೋಲೀಸರ ತನಿಖೆಯಿಂದ ಹೊರಬಿತ್ತು ಅಸಲಿಯತ್ತು !

Pinterest LinkedIn Tumblr

ತಾನು ಚಲಾಯಿಸುತ್ತಿದ್ದ ರೋಲ್ಸ್​ ರಾಯ್ಸ್​ ಕಾರು ಅಪಘಾತ ಆಗಲು ಅದರೊಳಗೆ ಗೆಳತಿಯೊಂದಿಗೆ ಸೆ#ಕ್ಸ್ ನಡೆಸುತ್ತಿದ್ದದ್ದೇ ಕಾರಣ ಎಂದು ಹೇಳಿದ್ದ ಉದ್ಯಮಿ. ಆದರೆ ಮುಂದೆ ತನಿಖೆ ನಡೆಸಿದ ಪೊಲೀಸರಿಗೆ ಸಿಕ್ಕಿತು ನಿಜಾಂಶ !

ಪ್ರಭಾವಿ ವ್ಯಕ್ತ ಕಾರು ಅಪಘಾತ ಮಾಡಿದ ನಂತರ ಅಥವಾ ವೇಗವಾಗಿ ಕಾರು ಚಾಲನೆ ಮಾಡಿ ಸಿಕ್ಕಿ ಬಿದ್ದ ವೇಳೆ ತಪ್ಪಿಸಿಕೊಳ್ಳಲು ಅವರು ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾರೆ. ಪ್ರ#ಕರಣ ಮುಚ್ಚಿ ಹಾಕಲು ಅನೇಕ ನಕಲಿ ದಾಖಲೆ ಸೃಷ್ಟಿಸುತ್ತಾರೆ.

ಇಂಗ್ಲೆಂಡ್ ಪ್ರಭಾವಿ ಉದ್ಯಮಿ ಕೂಡ ವೇಗವಾಗಿ ಕಾರು ಚಲಾಯಿಸಿ ಸಿಕ್ಕಿ ಬಿದ್ದಿದ್ದಾನೆ. ಚಲಿಸುತ್ತಿದ್ದ ಕಾರಿನಲ್ಲಿ ಸೆ#ಕ್ಸ್ ಮಾಡುತ್ತಿರುವುದಾಗಿ ಹೇಳಿದ್ದ. ಪೊಲೀಸರು ತನಿಖೆ ನಡೆಸಿದಾಗ ಈ ಪ್ರ#ಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಮೌರಿಸ್ ಫ್ರೆಡ್ ಹೆಸರಿನ ಉದ್ಯಮಿ ಸಾಕಷ್ಟು ಐಷಾರಾಮಿ ಕಾರುಗಳನ್ನು ಹೊಂದಿದ್ದ. ವೀಕೆಂಡ್ ಬಂತೆಂದರೆ ದೂರದ ಊರುಗಳಿಗೆ ಕಾರುಗಳನ್ನು ಚಾಲನೆ ಮಾಡಿಕೊಂಡು ಹೋಗುವುದು ಈತನ ಹವ್ಯಾಸ.

ಅಂತೆಯೇ ಒಂದು ದಿನ ಮೌರಿಸ್ ಐಷಾರಾಮಿ ರೋಲ್ಸ್ ರಾಯ್ಸ್ ತೆಗೆದುಕೊಂಡು ತೆರಳಿದ್ದ. ಈ ವೇಳೆ ಮೌರಿಸ್ ಎಡವಟ್ಟೊಂದನ್ನು ಮಾಡಿಕೊಂಡಿದ್ದ.

ಮೌರಿಸ್ ಕಾರು ಚಾಲನೆ ಮಾಡುವ ವೇಳೆ 50 ಕಿ.ಮೀ ವೇಗದಲ್ಲಿ ಸಾಗಬೇಕು ಎಂದಿದ್ದ ರಸ್ತೆಯಲ್ಲಿ 100 ಕಿ.ಮೀ ವೇಗದಲ್ಲಿ ಸಾಗಿದ್ದ. ಅಷ್ಟೇ ಅಲ್ಲ ವಾಹನವೊಂದಕ್ಕೆ ಗುದ್ದಿ ಪರಾರಿಯಾಗಿದ್ದ. ಇದನ್ನು ಪೊಲೀಸರು ನೋಡಿದ್ದಾರೆ.

ಪೊಲೀಸರು ಈ ಕಾರನ್ನು ಬೆನ್ನತ್ತಿ ಹೋದಾಗ ಮೋರಿಸ್ ಕಾರು ಮತ್ತಷ್ಟು ವೇಗವಾಗಿ ಚಲಿಸಿದ್ದ. ಪೊಲೀಸರ ವಾಹನ ಎಷ್ಟೇ ವೇಗವಾಗಿ ತೆರಳಿದ್ದರೂ ಈ ಕಾರನ್ನು ಚೇಸ್ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ನಿರ್ಜನ ಪ್ರದೇಶದಲ್ಲಿ ಈ ಕಾರು ಸಿಕ್ಕಿತ್ತು. ಕಾರಿನ ಮಾಲೀಕರ ಹೆಸರನ್ನು ಹುಡುಕಿದಾಗ ಅದರಲ್ಲಿ ಮೌರಿಸ್ ಹೆಸರಿತ್ತು.

ಮೌರಿಸ್ ಬಂಧಿಸಿ ಈ ಬಗ್ಗೆ ಕೇಳಿದಾಗ, “ನಾನು ಕಾರಿನಲ್ಲಿ ಇದ್ದಿದ್ದು ಹೌದು. ಆದರೆ, ಕಾರು ಚಾಲನೆ ಮಾಡುತ್ತಿರಲಿಲ್ಲ, ಹಿಂದಿನ ಸೀಟ್ನಲ್ಲಿದೆ. ನನ್ನ ಗರ್ಲ್ಫ್ರೆಂಡ್ ಜೊತೆ ಸೆ#ಕ್ಸ್ ಮಾಡುತ್ತಿದೆ. ಹೀಗಾಗಿ ಸಿಕ್ಕಿ ಬೀಳುವುದು ಬೇಡ ಎನ್ನುವ ಕಾರಣಕ್ಕೆ ಚಾಲಕನ ಬಳಿ ಕಾರು ವೇಗವಾಗಿ ಓಡಿಸುವಂತೆ ಹೇಳಿದ್ದೆ,” ಎಂದು ಸುಳ್ಳು ಹೇಳಿದ್ದ.

ಇದನ್ನು ಪೊಲೀಸರು ಕೂಡ ನಂಬಿದ್ದರು. ಆದರೆ, ಸಿಸಿಟಿವಿ ಪರಿಶೀಲಿಸಿದಾಗ ಕಾರಿನಲ್ಲಿ ಮೌರಿಸ್ ಒಬ್ಬನೇ ಇರುವ ವಿಚಾರ ಬೆಳಕಿಗೆ ಬಂದಿದೆ. ಈತನಿಗೆ 8 ತಿಂಗಳು ಜೈಲು ಶಿ#ಕ್ಷೆ ಹಾಗೂ ಎರಡು ವರ್ಷ ಚಾಲನಾ ಪರವಾನಗಿಯನ್ನು ರದ್ದುಮಾಡಿ ಕೋರ್ಟ್ ತೀರ್ಪು ನೀಡಿದೆ.

Comments are closed.