ಕರಾವಳಿ

ವಿವೇಕ್ ಟ್ರೇಡರ್ಸ್‌ನಿಂದ ನಾಳೆ “ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಹಾಗೂ ಆಯುಷ್ ಕ್ವಾಥ್ ಚೂರ್ಣ ಮಾತ್ರೆ ವಿತರಣೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.16: ಶ್ರೀ ನರೇಂದ್ರಮೋದಿಜಿಯವರ ಜನ್ಮದಿನದ ಪ್ರಯುಕ್ತ ಮಂಗಳೂರಿನ ವಿವೇಕ್ ಟ್ರೇಡರ್ಸ್ ಸಂಸ್ಥೆ ವತಿಯಿಂದ ನಾಳೆ (ಸೆಪ್ಟೆಂಬರ್ 17) “ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಹಾಗೂ ಉಚಿತ ಒಂದು ತಿಂಗಳ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಕ್ವಾಥ್ ಚೂರ್ಣದ ಮಾತ್ರೆ ವಿತರಣೆ ಕಾರ್ಯಕ್ರಮ ನಗರದ ಹಂಪನಕಟ್ಟೆಯಲ್ಲಿರುವ ( ಮಂಗಳೂರು ವಿವಿ ಕಾಲೇಜು ಮುಂಭಾಗ) ಪ್ರಸಿದ್ದ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ರಿಟೈಲ್ ಮಳಿಗೆ ಆಯುರ್ ವಿವೇಕ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅಗತ್ಯ ಇರುವವರಿಗೆ ಭಾರತ ಸರಕಾರದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಮಾಡಿಕೊಡಲಾಗುವುದು. ಜೊತೆಗೆ ಒಂದು ದಿನದ ಉಚಿತ ಆಯುಷ್ ಕ್ವಾಥ್ ಚೂರ್ಣ ಮಾತ್ರೆಯನ್ನು ವಿತರಿಸಲಾಗುವುದು.

ಭಾರತ ಸರಕಾರದ ಆಯುಷ್ ಇಲಾಖೆ ಅಂಗೀಕೃತ ರೋಗ ನಿರೋಧಕ ಹೆಚ್ಚಿಸುವ ಔಷಧಗಳ ಮಿಶ್ರಣ ಆಯುಷ್ ಕ್ವಾಥ್ ಚೂರ್ಣದ ಮಾತ್ರೆ ಇದಾಗಿದ್ದು ದಿನಕ್ಕೆರಡು ಬಾರಿ ಬಿಸಿ ನೀರಿನಲ್ಲಿ ಕಲೆಸಿ ರುಚಿಗೆ ಸಿಹಿಯನ್ನು ಸೇರಿಸಿ ಎರಡು ಹನಿ ನಿಂಬೆರಸ ಸೇರಿಸಿ ಕುಡಿಯಬಹುದಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಬೇಕು. ಪ್ರತಿಯೊಬ್ಬರು ತಮ್ಮ ಫೋನ್ ನಂಬರ್ ಹಾಗೂ ಹೆಸರನ್ನು ದಾಖಲಿಸಿಕೊಳ್ಳಬೇಕು. ಒಬ್ಬರಿಗೆ ಒಂದು ಬಾಟಲ್ ಮಾತ್ರೆ (ಒಂದು ತಿಂಗಳ ಕೋರ್ಸ್) ಉಚಿತವಾಗಿ ನೀಡಲಾಗುವುದು.

ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಇಚ್ಚಿಸುವ ಕುಟುಂಬದ ಸದಸ್ಯರು ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಬೆಳಗ್ಗೆ 10ರಿಂದ ಸಾಯಂಕಾಲ 5ರವರೆಗೆ ಉಚಿತ ಔಷಧವನ್ನು ವಿತರಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

Comments are closed.