ಕರಾವಳಿ

ರಾಜ್ಯದ ವಿವಿಧ (ಬಿಜೆಪಿ) ಮೋರ್ಚಾಗಳಿಗೆ ಮಂಗಳೂರು ವಿಭಾಗದಿಂದ ಪದಾಧಿಕಾರಿಗಳ ನೇಮಕ

Pinterest LinkedIn Tumblr

ಮಂಗಳೂರು : ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷರ ಅನುಮತಿ ಮೇರೆಗೆ ವಿವಿಧ ಮೋರ್ಚಾಗಳ ರಾಜ್ಯ ಅಧ್ಯಕ್ಷರು ರಾಜ್ಯದ ಮೋರ್ಚಾ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮಂಗಳೂರು ವಿಭಾಗ ಪ್ರಭಾರಿ ಶ್ರೀ ಕೆ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಇದರಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಿಭಾಗದಿಂದ ಪದಾಧಿಕಾರಿಗಳಾಗಿ ಜವಾಬ್ದಾರಿ ನೀಡಲಾದವರ ವಿವರ :

ರಾಜ್ಯ ಮಹಿಳಾ ಮೋರ್ಚಾ – ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಶಿಲ್ಪಾ ಜಿ ಸುವರ್ಣ ( ಉಡುಪಿ ಜಿಲ್ಲೆ )

ಎಸ್ ಸಿ ಮೋರ್ಚಾ -ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ದಿನಕರ ಬಾಬು ( ಉಡುಪಿ ಜಿಲ್ಲೆ )

ರೈತ ಮೋರ್ಚಾ- ರಾಜ್ಯ ಉಪಾಧ್ಯಕ್ಷರಾಗಿ ಶ್ರೀ ಎ. ವಿ. ತೀರ್ಥರಾಮ (ದಕ್ಷಿಣ ಕನ್ನಡ ) ಕಾರ್ಯದರ್ಶಿಯಾಗಿ ಡಾ. ನವೀನ್ ಕುಮಾರ್ (ಕೊಡಗು)

ಯುವ ಮೋರ್ಚಾ- ರಾಜ್ಯ ಕಾರ್ಯದರ್ಶಿಯಾಗಿ ಕುಮಾರಿ ಎಸ್. ಶ್ವೇತಾ (ದಕ್ಷಿಣ ಕನ್ನಡ)

ಹಿಂದುಳಿದ ಮೋರ್ಚಾ- ರಾಜ್ಯ ಕಾರ್ಯದರ್ಶಿಯಾಗಿ ಶ್ರೀ ವಿಠಲ ಪೂಜಾರಿ (ಉಡುಪಿ ಜಿಲ್ಲೆ)

ಅಲ್ಪಸಂಖ್ಯಾತ ಮೋರ್ಚಾ -ರಾಜ್ಯ ಕಾರ್ಯದರ್ಶಿಯಾಗಿ ಶ್ರೀ ಸಲೀಂ ಅಂಬಾಗಿಲು (ಉಡುಪಿ ಜಿಲ್ಲೆ)

ಎಸ್ ಟಿ ಮೋರ್ಚಾ -ರಾಜ್ಯ ಉಪಾಧ್ಯಕ್ಷರಾಗಿ ಎನ್ . ಎಸ್. ಮಂಜುನಾಥ (ದಕ್ಷಿಣ ಕನ್ನಡ ) ಕಾರ್ಯದರ್ಶಿಯಾಗಿ ಶ್ರೀಮತಿ ಮಂಜುಳ (ಕೊಡಗು ಜಿಲ್ಲೆ).

Comments are closed.