
ಮಂಗಳೂರು: ಅಕ್ಟೋಬರ್ 2020 ರಿಂದ ಸಪ್ಟೆಂಬರ್ 2021ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು – ಮೂಡಬಿದ್ರೆ ಹಾಗೂ ಸುಳ್ಯ ತಾಲೂಕಿನ ಕೆ.ಎಫ್. ಮತ್ತು ಸಿ.ಎಸ್.ಸಿ ಸಗಟು ಮಳಿಗೆಯಿಂದ ಆಯಾ ತಾಲೂಕಿನ ಅಕ್ಷರ ದಾಸೋಹ ಶಾಲಾ ಅಡುಗೆ ಕೇಂದ್ರಗಳಿಗೆ ಪೂರಕ ಆಹಾರ ಸಾಮಾಗ್ರಿಗಳನ್ನು ಸಾಗಾಣಿಕೆ ಮಾಡಲು ಅರ್ಹ ಟೆಂಡರ್ದಾರರಿಂದ ಅಲ್ಪಾವಧಿ ಇ-ಟೆಂಡರ್ ಕರೆಯಲಾಗಿದೆ.
ಆಸಕ್ತ ಟೆಂಡರುದಾರರು ಅರ್ಜಿ ಫಾರಂಗಳನ್ನು ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ www.eproc.karnataka.gov.in ನಿಂದ ಡೌನ್ಲೋಡ್ ಮಾಡಿ, ಸೆಪ್ಟೆಂಬರ್ 21 ರೊಳಗೆ ಇ-ಪ್ರೊಕ್ಯೂರ್ಮೆಂಟ್ ಮೂಲಕ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕಚೇರಿ ದೂರವಾಣಿ ಸಂಖ್ಯೆ 0824-2451205 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Comments are closed.