ಮಂಗಳೂರು ಆಗಸ್ಟ್ 25 :ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಸೋಮವಾರ ವೆನ್‍ಲಾಕ್ ಆಸ್ಪತ್ರೆಯ ಕೋವಿಡ್ ವಿಭಾಗದ ವೈರಾಣು ಪ್ರಯೋಗ ಶಾಲೆಗೆ ಹಾಗೂ ಹೊರರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೋವಿಡ್ ಆಸ್ಪತ್ರೆಯಲ್ಲಿ ಹೆಚ್ಚುವರಿ ವೆಂಟಿಲೇಟರ್ ಅಳವಡಿಸಲು ಬೇಕಾಗುವ ಸಾಧನ ಸಲಕರಣೆಯನ್ನು ಅಗತ್ಯ ನೆಲೆಯಲ್ಲಿ ಒದಗಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಶುಶ್ರೂಷಕ ಸಿಬ್ಬಂದಿ ಹಾಗೂ ವೈದ್ಯ ಸಿಬ್ಬಂದಿಗಳ ಕೊರತೆಗೆ ಆದ್ಯತೆಯ ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸುವಂತೆ ಸೂಚಿಸಿದರು.
ಗಂಟಲು ದ್ರವ ಪರೀಕ್ಷೆಗೆ ವೈರಾಣು ಪ್ರಯೋಗ ಶಾಲೆಗೆ ಬೇಕಾಗುವ ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಿಕೊಡುವ ಭರವಸೆ ನೀಡಿದರು. ಆಸ್ಪತ್ರೆಯ ಶುಚಿತ್ವದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೆನ್‍ಲಾಕ್ ಅಧೀಕ್ಷಕ ಡಾ. ಸದಾಶಿವ ಶ್ಯಾನುಭೋಗ, ಆರ್.ಎಂ.ಒ ಡಾ. ಜೂಲಿಯಾನ ಸಾಲ್ಯಾನ್, ಡಾ. ಶರತ್, ಡಾ. ಜೆಸಿಂತಾ ಮತ್ತಿತರರು ಉಪಸ್ಥಿತರಿದ್ದರು.
Comments are closed.