ಕರಾವಳಿ

ದೇಶದಲ್ಲಿ ಸಹಬಾಳ್ವೆ ಹಾಗೂ ಶಾಂತಿ ಕಟ್ಟಲು ಯುವಕರು ತಮ್ಮನ್ನು ತೊಡಗಿಸಿಕೊಳ್ಳಬೇಕು : ಮಾಜಿ ಸಚಿವ ರೈ

Pinterest LinkedIn Tumblr

ಮಂಗಳೂರು: ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು ಹಾಗೂ ರೊಶಿನಿ ನಿಲಯ ಮಂಗಳೂರು ಇದರ ಜಂಟಿ ಅಶ್ರಯದಲ್ಲಿ ಇಂದು ಸದ್ಭಾವನ ದಿನಾಚರಣೆಯನ್ನು ಕಾರ್ಯಕ್ರಮವನ್ನು ನಗರದ ರೋಶಿನಿ ನಿಲಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ್ ಸೂತರ್ ಪೇಟೆಯವರು ಸಧ್ಬಾವನ ದಿನದ ವಿಶೇಷತೆ ಹಾಗೂ ಶಾಂತಿ ಸಹಬಾಳ್ವೆಯ ಕುರಿತು ಹೇಳಿದರು.

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ ಮಾಜಿ ಶಾಸಕರು ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಅವರು ಯುವಕರನ್ನು ಉದ್ದೇಶಿಸಿ ಮಾತನಾಡಿ, ಯುವಕರು ದೇಶದ ಆಸ್ತಿ ಅವರು ತಮ್ಮನ್ನು ದೇಶದಲ್ಲಿ ಸಹಬಾಳ್ವೆ ಹಾಗೂ ಶಾಂತಿಯನ್ನು ಕಟ್ಟುವ ಸಲುವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗಣ್ಯಾಥಿತಿ ದಿನಕರ ಶೆಟ್ಟಿ, ರೋಶನಿ ನಿಲಯದ ವಿಭಾಗ ಮುಖ್ಯಸ್ಥರಾದ ಎಲೆವನ್, ನೆಹರೂ ಯುವ ಕೇಂದ್ರದ ಪ್ರತಿನಿಧಿ ವಿಕಾಸ್, ರೊಶಿನಿ ನಿಲಯದ ಪ್ರಾಂಶುಪಾಲರಾದ ಜೆನ್ನೀಸ್ ಮೇರಿ, ಹಾಗೂ ಇನ್ನಿತರ ಯುವ ಮುಖಂಡರು ಉಪಸ್ಥಿತರಿದ್ದರು.

ರಚನಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ,ಕೊನೆಯದಾಗಿ ಕಾರ್ಯಕ್ರಮದಲ್ಲಿ ಬಾಸಿತ್ ಬುಡೋಳಿಯವರು ಧನ್ಯವಾದ ಸಮರ್ಪಿಸಿದರು.

Comments are closed.