ಕರಾವಳಿ

ಬಿ‌ಎಸ್‌ಎನ್‌ಎಲ್ ಗ್ರಾಹಕರಿಗೆ ಮೊಬೈಲ್ ಮತ್ತು ಫೈಬರ್ ಸೇವೆಯಲ್ಲಿ ಯಾವುದೇತೊಂದರೆಯಾಗದಂತೆ ಸೇವೆ : ಎ.ಎಸ್. ಸುಕುಮಾರನ್

Pinterest LinkedIn Tumblr

ಮಂಗಳೂರು ಆಗಸ್ಟ್ 22 : ಅಖಿಲ ಭಾರತ ಬಿ.ಎಸ್.ಎನ್.ಎಲ್. ಪಿಂಚಣಿದಾರರ ಕ್ಷೇಮಾಭಿವೃದ್ಧಿ ಅಸೋಸಿಯೇಶನ್ ಇದರ 11ನೇ ವರ್ಷದ ಸಮಾರಂಭವನ್ನು ಸರಳ ರೀತಿಯಲ್ಲಿ ಬಿ.ಎಸ್.ಎನ್.ಎಲ್. ಕೇಂದ್ರಕಚೇರಿಯಲ್ಲಿ ನಡೆಸಲಾಯಿತು.

ಈ ಸಂದರ್ಭ ದಕ್ಷಣಕನ್ನಡ ಜಿಲ್ಲಾಟೆಲಿಕಾಂ ವೃತ್ತದಜನರಲ್ ಮ್ಯಾನೇಜರ್ ಆಗಿ ನೇಮಕಗೊಂಡಿರುವ ಎ.ಎಸ್. ಸುಕುಮಾರನ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಜನರಲ್ ಮ್ಯಾನೇಜರ್, ಬಿ.ಎಸ್.ಎನ್.ಎಲ್. ಗ್ರಾಹಕರಿಗೆ ಮೊಬೈಲ್ ಮತ್ತು ಫೈಬರ್ ಸೇವೆಯಲ್ಲಿಯಾವುದೇತೊಂದರೆಯಾಗದರೀತಿಯಲ್ಲಿಅಧಿಕಾರಿ ವರ್ಗದವರನ್ನು ಮತ್ತು ಸಿಬ್ಬಂದಿ ವರ್ಗದವರಜೊತೆ ಸೇರಿ ಸೇವೆ ನೀಡುವುದಾಗಿ ತಿಳಿಸಿದರು.

ಬಿ.ಎಸ್.ಎನ್.ಎಲ್. ಉತ್ಪಾದನೆಯನ್ನು ಮಾರಾಟ ಮಾಡುವ ಅಂಗಡಿಗಳಿಗೆ ಕ್ಲಪ್ತ ಸಮಯದಲ್ಲಿ ಸಹಕಾರ ನೀಡಲು ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು. ಬಿ.ಎಸ್.ಎನ್.ಎಲ್. ಪುನಶ್ಚೇತನದ ಬಗ್ಗೆ ಪಿಂಚಣಿ ದಾರರ ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು.

ಬಿ.ಎಸ್.ಎನ್.ಎಲ್. ಉಳಿಸುವಲ್ಲಿ ಪಿಂಚಣಿದಾರರಾದ ನಾವು ಕೂಡಾ ಸಹಕಾರ ನೀಡುತ್ತೇವೆಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಜಿಲಾ ್ಲಅಧ್ಯಕ್ಷ ಎಚ್.ರಾಮಕೃಷ್ಣ, ಜಿಲ್ಲಾ ಕಾರ್ಯದರ್ಶಿ ಕೆ.ಚಂದ್ರಮೋಹನ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ, ರಾಜ್ಯದಉಪಾಧ್ಯಕ್ಷ ಅನಿಲ್ ಕುಮಾರ್ ಹಾಗೂ ಬಿ.ಶ್ರೀನಿವಾಸ, ಕೆ.ಶಶಿಕಲಾ, ಮೋಲಿ ಮಿರಾಂಡ ಉಪಸ್ಥಿತರಿದ್ದರು.

Comments are closed.