ಉಡುಪಿ: ಉಡುಪಿ ತಾಲೂಕು ಬಡಗುಬೆಟ್ಟು ಗ್ರಾಮದ ಮಿಷನ್‌ಕಂಪೌಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಓರ್ವ ಯುವಕನನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇರ್ಷಾದ್‌ಖಾನ್ ಬಂಧಿತ ಆರೋಪಿ.

ನಗರ ಠಾಣೆ ಪಿಎಸ್ಐ ಸಕ್ತಿವೇಲು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಿಷನ್‌ಕಂಪೌಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ಯುವಕ ಗಾಂಜಾ ಸೇವಿಸಿ ಅಮಲಿನಲ್ಲಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಇರ್ಷಾದ್‌ಖಾನ್ ಎಂಬಾತನನ್ನು ವಶಕ್ಕೆ ಪಡೆದು, ಆತನು ಗಾಂಜಾ ಸೇವಿಸಿರುವ ಬಗ್ಗೆ ಫಾರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ , ತಜ್ಞ ವರದಿ ಪಡೆಯಲಾಗಿದ್ದು ಆರೋಪಿಯು ನಿಷೇಧಿತ ಗಾಂಜಾ (Marijuana) ಎಂಬ ಮಾದಕ ವಸ್ತುವನ್ನು ಸೇವಿಸಿರುವುದು ದೃಢಪಟ್ಟಿರುವುದರಿಂದ ಆತನ ವಿರುದ್ಧ ಪ್ರಕರಣವನ್ನು ದಾಖಲಿಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.