
ಮಂಗಳೂರು : ಅಳಪೆ ಉತ್ತರ ವಾರ್ಡಿನಲ್ಲಿ 25 ಬಡ ಕುಟುಂಬಗಳಿಗೆ ಹಕ್ಕುಪತ್ರವನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಹಲವಾರು ವರ್ಷಗಳಿಂದ ಬಾಕಿಯುಳಿದಿದ್ದ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಹಕ್ಕುಪತ್ರ ವಿಲೇವಾರಿ ಸಂಬಂಧಿಸಿದಂತೆ ಜನತೆಗೆ ನೀಡಿರುವ ಭರವಸೆಯನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದೇನೆ. ಸರಿಪಲ್ಲ ಕನ್ನಗುಡ್ಡೆಯ 25 ಕುಟುಂಬಗಳಿಗೆ ಹಕ್ಕುಪತ್ರ ಸಿಗದಿರುವ ಕುರಿತು ತಿಳಿದು ಬಂದಾಗ ತಕ್ಷಣವೇ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದೆ. ಆ ಪ್ರಕಾರ ಇಂದು ಇಲ್ಲಿನ ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯೆ ರೂಪಶ್ರೀ ಪೂಜಾರಿ, ಬಿಜೆಪಿ ಮುಖಂಡರಾದ ಭಾಸ್ಕರ್ ಚಂದ್ರ ಶೆಟ್ಟಿ, ವಸಂತ್ ಜೆ ಪೂಜಾರಿ, ಗೀತಾ ಶೆಟ್ಟಿ, ನರೇಶ್ ಸರಿಪಲ್ಲ, ಶರಣ್ ಸರಿಪಲ್ಲ, ಮಾಧವ ಕನ್ನಗುಡ್ಡೆ, ಕೀರ್ತನ್ ದಾಸ್, ಪ್ರವೀಣ್ ನಿಡ್ಡೇಲ್, ಗಾಯತ್ರಿ ಕಣ್ಣಗುಡ್ಡೆ, ಲೋಕೇಶ್ ಕನ್ನಗುಡ್ಡೆ, ದಿನೇಶ್ ನೂಜಿ, ತಹಶಿಲ್ದಾರ್ ಗುರುಪ್ರಸಾದ್, ಅಧಿಕಾರಿಗಳಾದ ಸ್ಟೀಫನ್, ಸುಮಂತ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.