
ಮಂಗಳೂರು : ರಾಜ್ಯ ವಾಲಿಬಾಲ್ ತಂಡದ ಮಾಜಿ ಆಟಗಾರ, ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ಹಾಗೂ ವಾಲಿಬಾಲ್ ತರಬೇತುದಾರ, ನಿವೃತ ದೈಹಿಕ ಶಿಕ್ಷಕ “ವಾಲಿಬಾಲ್ ಭೀಷ್ಮ” ಎಂದೇ ಹೆಸರುವಾಸಿಯಾಗಿದ್ದ ನಾಗೇಶ್ (60) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಗರದ ವಿವಿಧ ಶಾಲೆಗಳಲ್ಲಿ ದೈಹಿಕ ಶಿಕ್ಷಕ ರಾಗಿಯೂ ಸೇವೆ ಸಲ್ಲಿಸಿ ನಿವೃತರಾಗಿರುವ ನಾಗೇಶ್ ಅವರು ಮಕ್ಕಳಿಂದ ಹಿಡಿದು ಯುವಕರವರೆಗಿನವರು ಕಂಡಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು. ಜಿಲ್ಲೆಯ ವಾಲಿಬಾಲ್ ಕ್ಷೇತ್ರದ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ್ದಾರೆ.
ಹಲವು ಯುವ ಆಟಗಾರರನ್ನು ಕ್ರೀಡಾ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. ಇವರ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ 2018ರ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿ ಸಲಾಗಿದೆ. ಅವಿಭಜಿತ ದ.ಕ. ಜಿಲ್ಲೆಯ ವಾಲಿಬಾಲ್ ಆಟಗಾರರು ಇವರನ್ನು ‘ವಾಲಿಬಾಲ್ ಭೀಷ್ಮ’ ಎಂದೇ ಸಂಬೋಧಿಸುತ್ತಿದ್ದರು.
ಮಂಗಳೂರಿನ ಉರ್ವಸ್ಟೋರ್ ಮಂಗಳಾ ಫ್ರೆಂಡ್ಸ್ ಸಂಸ್ಥೆಯ ಸ್ಥಾಪಕ ಸದಸ್ಯರು ಹಾಗೂ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳಿಂದ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಗಮನಾರ್ಹವಾದ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೃತರು ತಾಯಿ, ಪತ್ನಿ, ಪುತ್ರಿ, ಇಬ್ಬರು ಸಹೋದರರು, ಸಹೋದರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Comments are closed.