ಕರಾವಳಿ

ಆಗಸ್ಟ್ 29 ಮತ್ತು 30 : ಮಂಗಳೂರಿನಲ್ಲಿ ಆನ್‍ಲೈನ್ ಚೆಸ್ ಪಂದ್ಯಾಟ

Pinterest LinkedIn Tumblr

ಮಂಗಳೂರು : ದೇಶದ ಖ್ಯಾತ ಹಾಕಿ ಪಟು ದ್ಯಾನ್‍ಚಂದ್ ಜನ್ಮ ದಿನವಾದ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಿಂದ ಪ್ರತಿ ವರ್ಷ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

2020-21ನೇ ಸಾಲಿನ ಕ್ರೀಡಾ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲಾ ಚೆಸ್ ಆಟಗಾರರಿಗೆ ಆನ್‍ಲೈನ್ ಚೆಸ್ ಪಂದ್ಯಾಟವನ್ನು ಆಗಸ್ಟ್ 29 ಮತ್ತು 30 ರಂದು ನಡೆಸಲಿದ್ದು, ಈ ಪಂದ್ಯಾಟವು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಡೇರಿಕ್ ಚೆಸ್ ಸ್ಕೂಲ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯಲಿದೆ.

ಪುರುಷರಿಗೆ ಹಾಗೂ ಮಹಿಳಾ ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಯಲಿರುವ ಈ ಪಂದ್ಯಾಟದಲ್ಲಿ ವಿಜೇತರಿಗೆ ನಗದು ಬಹುಮಾನ ದೊರೆಯಲಿದೆ.

ಪಂದ್ಯಾಟದಲ್ಲಿ ಭಾಗವಹಿಸುವ ಚೆಸ್ ಆಟಗಾರರು ವೆಬ್‍ಸೈಟ್ https://derickschessschool.com/registrationನಲ್ಲಿ ನೊಂದಣಿ ಮಾಡಬೇಕು. ಪಂದ್ಯಾಟವನ್ನು ಆಗಸ್ಟ್ 29 ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಿಪಡಿತ್ತಾಯ ಉದ್ಘಾಟಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯ, ಕುಲಸಚಿವರ ಕಚೇರಿ, ಮಂಗಳಗಂಗೋತ್ರಿ, ದೂರವಾಣಿ ಸಂಖ್ಯೆ 0824 2287276, 0824 2287424 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Comments are closed.