ಕರಾವಳಿ

ಸುರತ್ಕಲ್ ರಾಷ್ಟ್ರ ಭಕ್ತ ವೇದಿಕೆಯ ಸೈನಿಕ ಕಲ್ಯಾಣ ನಿಧಿಯಿಂದ ಬಡ ಕುಟುಂಬಗಳಿಗೆ ಸಹಾಯಧನ ಹಸ್ತಾಂತರ

Pinterest LinkedIn Tumblr

ಮಂಗಳೂರು : ಸುರತ್ಕಲ್ ರಾಷ್ಟ್ರ ಭಕ್ತ ವೇದಿಕೆಯ ಸೈನಿಕ ಕಲ್ಯಾಣ ನಿಧಿಯಿಂದ ದ.ಕ ಜಿಲ್ಲೆಯಲ್ಲಿ ಈಗಾಗಲೇ 10 ಸೈನಿಕ ಕುಟುಂಬಕ್ಕೆ ತಲಾ 25,000ದ ಹಾಗೆ 2.5 ಲಕ್ಷ ರೂದಪಾಯಿ ನೀಡಿದೆ.

ಇದೀಗ ಮತ್ತೆ ಉಳ್ಳಾಲ ಮಾಜಿ ಸೈನಿಕರ ಸಂಘ ಅಬ್ಬಕ್ಕ ವಲಯ ಕೊಲ್ಯ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಕ್ಷೇತ್ರದ ಕೊಲ್ಯದ ದಿ. ನಾಯಕ್ ಗಣೇಶ್ ಅವರ ಕುಟುಂಬಕ್ಕೆ ಮತ್ತು ನಾಯಕ್ ರವೀಂದ್ರ ಗಟ್ಟಿಯವರ ಮಗಳು ಅಪಘಾತದಿಂದ ಕೋಮಾದಲ್ಲಿದ್ದು ಅವರ ಕುಟುಂಬಕ್ಕೆ ತಲಾ 25000ದ ಹಾಗೆ ಎರಡು ಕುಟುಂಬಕ್ಕೆ 50,000 ಧನ ಸಹಾಯವನ್ನು ಸುರತ್ಕಲ್ ರಾಷ್ಟ್ರ ಭಕ್ತ ವೇದಿಕೆ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸುರತ್ಕಲ್ ರಾಷ್ಟ್ರ ಭಕ್ತ ವೇದಿಕೆ ಕಾರ್ಯದರ್ಶಿ ಮಹೇಶ್ ಮೂರ್ತಿ, ಗೌರವ ಸಲಹೆಗಾರರಾದ ಸಾರ್ಜಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಉಳ್ಳಾಲ ಮಾಜಿ ಸೈನಿಕರ ಸಂಘ ಅಬ್ಬಕ್ಕ ವಲಯ ಕೊಲ್ಯ ಅಧ್ಯಕ್ಷರಾದ ಲಯನ್ ಅಡ್ವೋಕೇಟ್ ಕೆ.ಸಿ ನಾರಾಯಣ್, ಉಪಾಧ್ಯಕ್ಷ ಸಿದ್ದಾರ್ಥ್, ಖಜಾಂಜಿ ಸುದಾಕರ ಕುಂಪಲ, ಸದಸ್ಯರಾದ ಬಿ.ಎನ್ ಕೃಷ್ಣ, ದಿನೇಶ್ ಕಾಜವ, ಕೆ.ಕೆ ಗಿರೀಶ್ ಕುಮಾರ್, ವಿಜಯನ್, ಮತ್ತು ದಿ. ನಾಯಕ್ ಗಣೇಶ್ ಅವರ ಧರ್ಮ ಪತ್ನಿ ಎಮ್.ಜಿ ಪುಷ್ಪ, ಪುತ್ರಿ ಅಮೃತೇಶ್ವರಿ ಉಪಸ್ಥಿತರಿದ್ದರು.

ಉಳ್ಳಾಲ ಮಾಜಿ ಸೈನಿಕರ ಸಂಘ ಅಬ್ಬಕ್ಕ ವಲಯ ಕೊಲ್ಯ ಇದರ ಕಾರ್ಯದರ್ಶಿ ವೆಂಕಟೇಶ್ ಕುಂಪಲ ವಂದಿಸಿದರು.

Comments are closed.