ಕರ್ನಾಟಕ

ಹಳ್ಳಿಗಳಲ್ಲಿ ಅಧಿಕಗೊಳ್ಳುತ್ತಿರುವ ಕೊರೊನಾ: ಸ್ತಬ್ಧಗೊಂಡ ಕೃಷಿ ಚಟುವಟಿಕೆ!

Pinterest LinkedIn Tumblr


ಕೊರೊನಾ ಮಹಾಮಾರಿ ತನ್ನ ಕರಾಳ ಹಸ್ತವನ್ನು ಹಳ್ಳಿಗಳಿಗೂ ಚಾಚಿದೆ. ಇದರಿಂದಾಗಿ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ರೈತಾಪಿ ವರ್ಗ ಕಂಗಾಲಾಗಿದೆ. ಸೋಂಕು ದೃಢವಾದ ಹಳ್ಳಿಯ ಜನರು ಮನೆಯಿಂದ ಹೊರಬರಲು ಆಗದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗದೆ ಪರದಾಡುವಂತೆ ಆಗಿದೆ.

ದೊಡ್ಡಬೆಳವಂಗಲ:ನಗರವನ್ನು ಹಿಂದಿಕ್ಕುತ್ತಿರುವ ಕೊರೊನಾ ಮಹಾಮಾರಿಯಿಂದಾಗಿ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೂ ತೊಂದರೆಯಾಗುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಗರಕ್ಕಿಂತ ಹಳ್ಳಿಗಳು ಸೀಲ್‌ಡೌನ್‌ ಆಗುತ್ತಿವೆ. ಇಲ್ಲಿಯವರೆಗೂ ನಗರದಲ್ಲಿ 40 ಪ್ರದೇಶ ಮತ್ತು 50ಕ್ಕೂ ಹೆಚ್ಚು ಹಳ್ಳಿಗಳು ಸೀಲ್‌ಡೌನ್‌ ಆಗಿವೆ.

ಈಗಲೇ ಬಿತ್ತನೆ ಕೆಲಸ ಪ್ರಾರಂಭವಾಗಿದ್ದು, ರೈತರು ಕೃಷಿಗೆ ಬೇಕಾದ ವಸ್ತುಗಳಿಗಾಗಿ ನಗರ ಪ್ರದೇಶಗಳಿಗೆ ಹೋಗುತ್ತಾರೆ. ಆದರೆ ಸೋಂಕು ದೃಢವಾದ ಹಳ್ಳಿಯ ಜನರು ಮನೆಯಿಂದ ಹೊರಬರಲು ಆಗದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗದೆ ಪರದಾಡುವಂತೆ ಆಗಿದೆ.

ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಜನರಿಗೆ ಹಳ್ಳಿಗಳಲ್ಲಿ ಸೋಂಕು ಹೆಚ್ಚಿರುವುದರಿಂದ, ಕೂಲಿ ಸಿಗದೆ ತೊಂದರೆಯಾಗಿದೆ. ಕೆಲವರು ಕೃಷಿ ಮಾಡಿ ನಾಲ್ಕು ಜನರಿಗೆ ಅನ್ನ ಹಾಕುತ್ತಿದ್ದವರೇ ಈಗ ಸರಕಾರ ನೀಡುವ ದಿನಸಿ ವಸ್ತುಗಳಿಗಾಗಿ ಕಾಯುವಂತಾಗಿದೆ.

ಗ್ರಾಮದಲ್ಲಿ ಸೋಂಕು ಬಂದರೆ ಅಕ್ಕ-ಪಕ್ಕದ ಮನೆಯವರನ್ನು ಯಾರೂ ಗ್ರಾಮಕ್ಕೆ ಕರಿಸಿಕೊಳ್ಳುತ್ತಿಲ್ಲ. ತಾರತಮ್ಯ ಮಾಡಲಾಗುತ್ತಿದೆ. ಆದ್ದರಿಂದ ಗ್ರಾಮದಿಂದ ಹೊರಗೆ ತೋಟದ ಮನೆಗಳಲ್ಲಿ ಜನರು ವಾಸ ಮಾಡುವಂತಾಗಿದೆ.

ಕೊರೊನ ಸೋಂಕಿನಿಂದ ರೋಗಿಗಳು ಪರದಾಡಿದರೆ, ಅಕ್ಕ ಪಕ್ಕದ ಮನೆಯವರು ಮತ್ತು ಈ ಪ್ರದೇಶದ ಜನರು ಕೆಲಸ ಕಾರ್ಯಗಳಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಯಾರೂ ನಮ್ಮನ್ನು ಕೂಲಿಗೆ ಕರೆಯುತ್ತಿಲ್ಲ. ನಮ್ಮನ್ನು ಇತರೆ ಜನರು ಕೆಟ್ಟ ರೀತಿಯಲ್ಲಿ ನೋಡುತ್ತಾರೆ. ಯಾವುದೇ ರೋಗ ಲಕ್ಷಣಗಳು ಇಲ್ಲದೆ ಇದ್ದರೂ ಕೊರೊನಾ ಸೋಂಕು ದೃಢಪಡುತ್ತಿದೆ ನಾವೇನು ಮಾಡಲಿಕ್ಕೆ ಆಗುತ್ತದೆ.

ಗ್ರಾಮಾಂತರ ಭಾಗಕ್ಕೆ ಸೋಂಕು ಹೆಚ್ಚು ಹರಡದಂತೆ ಕ್ರಮ ಕೈಗೊಳ್ಳುತ್ತೇವೆ. ಸೀಲ್‌ಡೌನ್‌ ಪ್ರದೇಶಗಳಲ್ಲಿ ಬೇಕಾದ ಎಲ್ಲಾ ಸವಲತ್ತುಗಳನ್ನು ಅವರ ಮನೆಯ ಬಾಗಿಲಿಗೇ ಒದಗಿಸಲಾಗುತ್ತಿದೆ.

Comments are closed.