ಕರಾವಳಿ

ದ.ಕ.ಜಿಲ್ಲೆ : ಆಗಸ್ಟ್.18ರಂದು ಪೊಲೀಸ್ ಇಲಾಖೆಯ ನಿರುಪಯುಕ್ತ ವಾಹನಗಳ ಬಹಿರಂಗ ಹರಾಜು

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಪೊಲೀಸ್ ಇಲಾಖೆಗೆ ಸೇರಿದ ಹಳೆಯ ಹಾಗೂ ನಿರುಪಯುಕ್ತ ಗೊಳಿಸಲಾದ 5 ವಾಹನವನ್ನು ಹಾಗೂ ನಿಷ್ಕ್ರಿಯಗೊಳಿಸಲಾದ ಹಳೆಯ ವಾಹನದ ಬಿಡಿಭಾಗಗಳು ಮತ್ತು ಹಳೆಯ ಮಡ್ ಆಯಿಲ್‍ಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಆಗಸ್ಟ್ 18 ರಂದು ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ನಿಗದಿಪಡಿಸಲಾಗಿದೆ.

ಹರಾಜು ಮಾಡುವ ವಾಹನಗಳ ವಿವರ ಇಂತಿವೆ:

ಕೆಎ 19ಜಿ 347 ಟಿವಿಎಸ್ ಮೋಟಾರ್ ಸೈಕಲ್ ಮಾದರಿ 2006, ಕೆ 19 ಜಿ 172 ಬಜಾಜ್ ಮೋಟಾರ್ ಸೈಕಲ್ ಮಾದರಿ 1997, ಕೆ 19 ಜಿ 327 ಟಿವಿಎಸ್ ಮೋಟಾರ್ ಸೈಕಲ್ ಮಾದರಿ 2006, ಕೆ ಎ 19 ಜಿ 198 ಬಜಾಜ್ ಕವಾಸಕಿ ಮೋಟಾರ್ ಸೈಕಲ್ ಮಾದರಿ 1999, ಕೆ 19 ಜಿ 246 ಟಿವಿಎಸ್ ಫಿಯರೋ ಮೋಟಾರ್ ಸೈಕಲ್ ಮಾದರಿ 2002.

ನಿರುಪಯುಕ್ತ ವಸ್ತುಗಳ ವಿವರ ಇಂತಿವೆ:

ಹಳೆಯ ನಿಷ್ಕ್ರಿಯಗೊಳಿಸಲಾದ ಬಿಡಿ ಭಾಗಗಳು ಸಂಖ್ಯೆ 491- ನಿಗದಿಗೊಳಿಸಿದ ಮೊತ್ತ ರೂ. 10,000, ಹಳೆಯ ಮಡ್ಡ್ ಆಯಿಲ್ (ನಿರುಪಯುಕ್ತ ಆಯಿಲ್) ಸಂಖ್ಯೆ 360 ಲೀ ನಿಗದಿಗೊಳಿಸಿದ ಮೊತ್ತ ರೂ. 5,000.

ಹರಾಜು ಮಾಡಲಿರುವ ನಿರುಪಯುಕ್ತ ವಾಹನಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಪೊಲೀಸ್ ಘಟಕದ ಜಿಲ್ಲಾ ಸಶಸ್ತ್ರ ಪೊಲೀಸು ಮೀಸಲು ಪಡೆ ಕಚೇರಿಯ ಆವರಣದಲ್ಲಿ ಇರಿಸಲಾಗಿದೆ.

ಟೆಂಡರ್/ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಕೋವಿಡ್-19 ವೈರಾಣುವನ್ನು ತಡೆಗಟ್ಟುವ ಮುಂಜಾಗೃತ ಕ್ರಮವಾಗಿ ಕಡ್ಡಾಯವಾಗಿ ಮುಖಕ್ಕೆ ಕವಚವನ್ನು ಧರಿಸಬೇಕು. ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.

ಟೆಂಡರ್‍ಗಳನ್ನು ಆಗಸ್ಟ್ 17 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿ ಗಳನ್ನು ತಿರಸ್ಕರಿಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಸಂಪರ್ಕಿಸಲು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಬಿ.ಎಂ.ಲಕ್ಷ್ಮೀ ಪ್ರಸಾದ ಅವರ ಪ್ರಕಟಣೆ ತಿಳಿಸಿದೆ.

Comments are closed.