ಕರಾವಳಿ

ಆಗಸ್ಟ್ 9ರಂದು ಅಂತಾರಾಷ್ಟ್ರೀಯ ವಿಚಾರಸಂಕಿರಣ : ಝೂಮ್ ಆಪ್ ಮತ್ತು ಯೂಟ್ಯೂಬ್‍ನಲ್ಲಿ ನೇರ ಪ್ರಸಾರ

Pinterest LinkedIn Tumblr

ಮಂಗಳೂರು :ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ತತ್ತ್ವಚಿಂತನ ಪ್ರಚಾರೋಪನ್ಯಾಸ’ ಮಾಲಿಕೆಯಡಿ ‘ವಚನಕಾರರು ಮತ್ತು ಕನಕದಾಸರು : ತಾತ್ವಿಕ ಅನುಸಂಧಾನ’ ಎಂಬ ವಿಷಯದ ಕುರಿತ ಅಂತಾರಾಷ್ಟ್ರೀಯ ವಿಚಾರಸಂಕಿರಣ (ವೆಬಿನಾರ್)ವನ್ನು ಸಿದ್ಧಮಂಗಳಾ ಸೇವಾ ಕೇಂದ್ರ, ಬೆಂಗಳೂರು, ಬಸವ ಬಳಗ ಮಸ್ಕತ್ ಹಾಗೂ ವಚನ ಸಮಾಜ ಪೋಲೆಂಡ್ ಇವರ ಸಂಯುಕ್ತ ಸಹಯೋಗದೊಂದಿಗೆ ಆಗಸ್ಟ್ 09 ರಂದು ಸಂಜೆ 4 ಗಂಟೆಗೆ ಝೂಮ್ ಆಪ್ ಮತ್ತು ಯೂಟ್ಯೂಬ್ ನೇರಪ್ರಸಾರದ ಮೂಲಕ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಇವರು ನೆರವೇರಿಸಲಿರುವರು. ದಿಕ್ಸೂಚಿ ಭಾಷಣವನ್ನು ವಿದ್ವಾಂಸರಾದ ಪ್ರೊ. ಬಿ.ಎ. ವಿವೇಕ ರೈ, ಮಾಡಲಿರುವರು. ಕೆ. ರಾಜು ಮೊಗವೀರ ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ, ಶಿವಕುಮಾರ ಕೆಂಚನಗೌಡ್ರ, ಬಸವ ಬಳಗ, ಮಸ್ಕತ್ ಓಮನ್ ಇವರು ಭಾಗವಹಿಸಲಿದ್ದಾರೆ.

‘ವಚನಕಾರರು ಮತ್ತು ಕನಕದಾಸರು : ತಾತ್ವಿಕ ಅನುಸಂಧಾನ’ ಎಂಬ ವಿಚಾರಗೋಷ್ಠಿಯಲ್ಲಿ `ವಚನಕಾರರ ಸಾಮಾಜಿಕ ಚಿಂತನೆ’ ಎಂಬ ವಿಷಯದ ಕುರಿತು ಪ್ರೀತಿ ಶಿವಯೋಗಿ ಜವಳಗದ್ದಿ, ಬಸವ ಬಳಗ, ಮಸ್ಕತ್, ಓಮನ್, `ಕನದಾಸರ ಸಾಹಿತ್ಯದ ತಾತ್ವಿಕತೆ’ ಎಂಬ ವಿಷಯದಲ್ಲಿ ಪ್ರೊ. ಜಿ.ಎನ್. ಉಪಾಧ್ಯ, ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, `ವಚನಕಾರರ ಲೋಕಾನುಭವ’ ಎಂಬ ವಿಷಯದಲ್ಲಿ ಶಿವಕುಮಾರ ಶೇಖರ್, ಅಧ್ಯಕ್ಷರು ವಚನ ಸಮಾಜ ಪೋಲೆಂಡ್ ಇವರು ವಿಚಾರ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರು ಸಿದ್ಧಮಂಗಳಾ ಸೇವಾ ಕೇಂದ್ರ, ಬೆಂಗಳೂರು ಪ್ರೊ. ಜಯಶ್ರೀ ಎಂ. ಒಡೆಯರ್, ಇವರು ವಹಿಸಲಿರುವರು. ಕಾರ್ಯಕ್ರಮದ ಆಶಯ ನುಡಿಯನ್ನು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಇವರು ನಿರ್ವಹಿಸಲಿರುವರು.

ಸಂಯೋಜಕರು, ಸಿದ್ಧಮಂಗಳಾ ಸೇವಾ ಕೇಂದ್ರ, ಬೆಂಗಳೂರು ಡಾ. ಶೀಲಾದೇವಿ ಎಸ್. ಮಳೀಮಠ, ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಲಹೆಗಾರರು, ಭಾರತೀಯ ಸಾಮಾಜಿಕ ವೇದಿಕೆ ಕರ್ನಾಟಕ ವಿಭಾಗ ಹಾಗೂ ಬಸವ ಬಳಗ, ಮಸ್ಕತ್, ಓಮನ್‍ಭೀಮ ನೀಲಕಂಠರಾವ್ ಹಂಗರಗೆ, ಇವರು ಸಹಕಾರವನ್ನು ನೀಡಲಿದ್ದಾರೆ ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಇವರು ತಿಳಿಸಿದ್ದಾರೆ.

ವಿಚಾರ ಸಂಕಿರಣದಲ್ಲಿ ಝೂಮ್ ಆಪ್ ನ Meeting ID : 9525542977 Passcode : `vachana’ ಈ ಲಿಂಕ್ ಬಳಸಿಕೊಳ್ಳಬಹುದಾಗಿದೆ. ಈ ವೆಬಿನಾರ್‍ನಲ್ಲಿ ಭಾಗವಹಿಸುವವರು ಮುಂಗಡವಾಗಿ ನೋಂದಣಿ ಮಾಡಬೇಕಿದ್ದು https://forms.gle/qgZXAhZ4Xa35Ufbv5 ಲಿಂಕ್ ಬಳಸಿಕೊಳ್ಳಬೇಕು. ಭಾಗವಹಿಸಿದವರಿಗೆ ಇ-ಪ್ರಮಾಣ ಪತ್ರವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೇಂದ್ರದ ಸಂಶೋಧನ ಸಹಾಯಕ ಆನಂದ ಎಂ.ಕಿದೂರು ಮೊ.ನಂ. 9591480138 ಸಂಪರ್ಕಿಸಬಹುದಾಗಿದೆ.

Comments are closed.