ಕರಾವಳಿ

ಸಂಸ್ಕಾರ ಭಾರತಿ ಆಶ್ರಯದಲ್ಲಿ ಭವ್ಯ ರಾಮ ಮಂದಿರದ ಭೂ ಅಲಂಕರಣದಲ್ಲಿ ರಂಗೋಲಿ ರಚನೆ

Pinterest LinkedIn Tumblr

ಮಂಗಳೂರು : ಅಯೋಧ್ಯೆಯಲ್ಲಿ ವಿಶಾಲ ಹಾಗೂ ವೈಭವಪೂರ್ಣ ಶ್ರೀ ರಾಮಚಂದ್ರನ ಮಂದಿರದ ನಿರ್ಮಾಣಕ್ಕಾಗಿ ಮಹತ್ವದ ಶಿಲಾನ್ಯಾಸದ ಶುಭಸಂದರ್ಭ ಸಂಸ್ಕಾರ ಭಾರತಿ ಆಶ್ರಯದಲ್ಲಿ ಭವ್ಯ ರಾಮ ಮಂದಿರದ ಭೂ ಅಲಂಕರಣದಲ್ಲಿ ರಂಗೋಲಿ ರಚನೆ ಕಾರ್ಯಕ್ರಮ ನಡೆಯಿತು.

ಹಂಪನಕಟ್ಟ ಪಿ.ಎಂ. ರಸ್ತೆಯ ಪೋಸ್ಟ್ ಆಫೀಸ್ ಹತಿರ ಇರುವ ಹಳೆಯ ಪೆಟ್ರೋಲ್ ಪಂಪ್ ಬಳಿ ಇರುವ ಜಾಗದಲ್ಲಿ ಸಂಸ್ಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಸದಸ್ಯರಾದ ದಯಾ ಆರ್ಟ್ಸ್ ನ ದಯಾನಂದ, ರೂಪ, ರೇಣುಕಾ, ಶ್ರೀಲತಾ ಮತ್ತು ಹರ್ಷಿತ ಭವ್ಯ ರಾಮ ಮಂದಿರವನ್ನು ಭೂ ಅಲಂಕರಣದಲ್ಲಿ ರಂಗೋಲಿ ರಚಿಸಿದರು.

ಶಾಸಕ ವೇದವ್ಯಾಸ್ ಕಾಮತ್ ಪುಷ್ಪಾರ್ಚನೆ ಮಾಡಿದರು. ಸಂಸ್ಕಾರ ಭಾರತಿ ಮಂಗಳೂರು ಇದರ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಾಂತ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸರ್, ಸಂಸ್ಕಾರ ಭಾರತಿಯ ಮಂಗಳೂರು ಕಾರ್ಯದರ್ಶಿ  ಮಾಧವ ಭಂಡಾರಿ, ಗಣೇಶ್ ಕುಮಾರ್, ರಘುವೀರ್ ಗಟ್ಟಿ, ಶ್ರೀಲತಾ ನಾಗರಾಜ್ ಲಯನ್ಸ್ ಕ್ಲಬ್ ಒಫ್ ಮೆಟ್ರೋ ಗೋಲ್ಡ್ ಅಧ್ಯಕ್ಷ ಹರಿಪ್ರಸಾದ್ ರೈ, ಪ್ರಚಾರ್ ಪ್ರಮುಖ್ ಸುಜೀರ್ ವಿನೋದ್ ಮುಂತಾದವರು ಉಪಸ್ಥಿತರಿದ್ದರು

Comments are closed.