ಕುಂದಾಪುರ: ಸ್ವಿಫ್ಟ್ ಕಾರಿನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ತಡರಾತ್ರಿ ಗಂಗೊಳ್ಳಿ ಗ್ರಾಮಪಂಚಾಯತ್ ಸಮೀಪ ನಡೆದಿದೆ.
ಗಂಗೊಳ್ಳಿ ಬೀಚ್ ರಸ್ತೆ ನಿವಾಸಿಗಳಾದ ಮೊಹಮ್ಮದ್ ಶಫಾನ್ (30), ನಿಜಾಮ್ ಕನ್ನಂಗರ್ ಮೊಹಿದ್ದೀನ್(33) ಬಂಧಿತ ಆರೋಪಿಗಳು. ಇವರಿಂದ 13 ಕೆ.ಜಿ. ತೂಕದ ದನದ ಮಾಂಸ ಹಾಗೂ ಸಾಗಾಟಕ್ಕೆ ಬಳಸಿದ ಸ್ವಿಫ್ಟ್ ಕಾರು ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ…..
ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು ದಿನಾಂಕ ಆ.5 ಮಂಗಳವಾರರ ರಾತ್ರಿ 12:10 ಕ್ಕೆ ಸಿಬ್ಬಂದಿಗಳಾದ ರಾಜೇಶ್, ಪ್ರೊಬೇಷನರಿ ಪಿ.ಎಸ್.ಐ ದೇವರಾಜ ಸಿದ್ದಣ್ಣ ಬಿರಾದಾರ ಹಾಗೂ ಹೆಡ್ ಕಾನ್ಸ್‌ಟೇಬಲ್ ಸಂತೋಷ ಖಾರ್ವಿಯವರೊಂದಿಗೆ ಗಂಗೊಳ್ಳಿ ಪೇಟೆಯ ಗಂಗೊಳ್ಳಿ ಗ್ರಾಮಪಂಚಾಯತ್ ಕಛೇರಿಯ ಸಮೀಪದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದು, ವಾಹನ ತಪಾಸಣೆ ಮಾಡುತ್ತಿದ್ದಾಗ ತ್ರಾಸಿ ಕಡೆಯಿಂದ ಗಂಗೊಳ್ಳಿ ಬಂದರ್ ಕಡೆಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 13 ಕೆ.ಜಿ ತೂಕದ 2,600/-ರೂ ಮೌಲ್ಯದ ದನದ ಮಾಂಸವನ್ನು ವಶಪಡಿಸಿಕೊಂಡು ಆರೋಪಿಗಳಾದ ಕಾರಿನ ಚಾಲಕ ಮೊಹಮ್ಮದ್ ಶಫಾನ್(30) ಹಾಗೂ ಇನ್ನೊಬ್ಬ ನಿಜಾಮ್ ಕನ್ನಂಗರ್ ಮೊಹಿದ್ದೀನ್(33), ಎನ್ನುವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.