ಕರಾವಳಿ

ಅಯೋಧ್ಯೆಯಲ್ಲಿ ಭೂಮಿ ಪೂಜೆ ಹಿನ್ನಲೆ : ಮಂಗಳೂರಿನಲ್ಲಿ ನಿಷೇಧಾಜ್ಞೆ ಜ್ಯಾರಿ

Pinterest LinkedIn Tumblr

ಮಂಗಳೂರು, ಆಗಸ್ಟ್,04: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಕಮಿಷನೇಟರ್ ವ್ಯಾಪ್ತಿಯಲ್ಲಿನಾಳೆ ನಿಷೇಧಾಜ್ಞೆ ಹೊರಡಿಸಿ ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್ ‌ಕುಮಾರ್ ಸೋಮವಾರ ಆದೇಶ ಹೊರಡಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂದು ರಾತ್ರಿ 8ರಿಂದ ಆಗಸ್ಟ್.6ರಂದು ಬೆಳಗ್ಗೆ 6 ಗಂಟೆವರೆಗೆ ಸಿಆರ್‌ಪಿಸಿಯ ಕಲಂ 144 ಸೆಕ್ಷನ್‌ನಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಭೂಮಿಪೂಜೆಯು ಆ.5ರಂದು ನೆರವೇರಲಿದ್ದು, ಅಂದು ಹಿಂದೂ ಸಂಘಟನೆಗಳು ಸಂಭ್ರಮಾಚರಣೆ ನಡೆಸಲು ಸಿದ್ದತೆ ನಡೆಸಿದೆ ಹಾಗೂ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಮತೀಯ, ರಾಜಕೀಯ ಗಲಭೆ ಗಳನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕ ಪ್ರಾಣ, ಆಸ್ತಿಪಾಸ್ತಿ ಹಾನಿ ತಡೆಗಟ್ಟುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಷೆ ವಿಧಿಸಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್‌ಕುಮಾರ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಷೆ ಜಾರಿಯಲ್ಲಿರುವಾಗ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಬಾರದು. ಶಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲು, ಲಾಠಿ ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ಮಾರಕಾಸ್ತ್ರಗಳನ್ನು ಸಾಗಿಸು ವಂತಿಲ್ಲ. ಪಟಾಕಿ ಸಿಡಿಸುವುದು, ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಸಾಗಿಸುವಂತಿಲ್ಲ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಧರಣಿ, ಮುಷ್ಕರ, ಮುತ್ತಿಗೆ, ಬೈಕ್ ರ್ಯಾಲಿ, ಸಮಾರಂಭ ನಡೆಸುವಂತಿಲ್ಲ. ಕಲ್ಲು ಎಸೆಯುವಂತಿಲ್ಲ. ವ್ಯಕ್ತಿಯಗಳ ಅಥವಾ ಅವರ ಶವಗಳ ಅಥವಾ ಆಕೃತಿ-ಪ್ರತಿಕೃತಿಗಳ ಪ್ರದರ್ಶನ ನಿಷಿದ್ಧ. ಸಾರ್ವಜನಿಕ ಸುವ್ಯವಸ್ಥೆಗೆ ಬಾಧೆಯನ್ನುಂಟು ಮಾಡುವುದು, ರಾಜ್ಯದ ಭದ್ರತೆ ಕುಗ್ಗಿಸುವುದು, ಅಪರಾಧ ಕೃತ್ಯಕ್ಕೆ ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಗುವುದು, ಹಾಡು, ಸಂಗೀತ, ಆವೇಶಭರಿತ ಭಾಷಣ ಮಾಡುವಂತಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್ ‌ಕುಮಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಮುಖ ಅಂಶಗಳು :

ಆಗಸ್ಟ್ 5 ರಂದು ರಾಮ ಮಂದಿರದ ಭೂಮಿ ಪೂಜೆ ಹಿನ್ನಲೆ

ಮಂಗಳೂರಿನಲ್ಲಿ ಆಗಸ್ಟ್ 5 ರಂದು 144 ಸೆಕ್ಷನ್ ಜಾರಿ

ನಿಷೇಧಾಜ್ಞೆ ಆದೇಶ ಹೊರಡಿಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್

ವಿಕಾಶ್ ಕುಮಾರ್,ಮಂಗಳೂರು ನಗರ ಪೊಲೀಸ್ ಕಮೀಷನರ್

ಭೂಮಿ ಪೂಜಾನಾ ದಿನದಂದು ಸಂಭ್ರಮಾಚರಣೆ ಆಯೋಜಿಸಿದ್ದ ಹಿಂದೂ ಸಂಘಟನೆಗಳು

ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆಗೂ ಸಿದ್ಧತೆ ಬಗ್ಗೆ ಮಾಹಿತಿ

ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ನಿಷೇಧಾಜ್ಞೆ ಉಲ್ಲಂಘಿಸದಂತೆ ಖಡಕ್ ಆದೇಶ ನೀಡಿದ ಮಂಗಳೂರು ಕಮೀಷನರ್.

Comments are closed.