ಉಡುಪಿ: ಕೊರೊನಾ ವಾರಿಯರ್ ಉಡುಪಿಯ ರಾಜೀವಿ ಡಿಸಿ ಜಿ. ಜಗದೀಶ್ ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದ್ದಾರೆ.

ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಪೆರ್ಣಂಕಿಲದಿಂದ ತುಂಬು ಗರ್ಭಿಣಿಯನ್ನು ರಾತ್ರಿ ಮೂರು ಗಂಟೆಗೆ ತಮ್ಮ ಆಟೋದಲ್ಲಿ ರಾಜೀವಿ ಉಡುಪಿ ನಗರದ ಆಸ್ಪತ್ರೆಗೆ ಸೇರಿಸಿ ಕರ್ತವ್ಯ ಪಾಲಿಸಿದ್ದರು. ತಾನೇ ಆಟೋ ಚಲಾಯಿಸಿಕೊಂಡು ಹೋದ ಮಹಿಳೆಯ ದಿಟ್ಟತನ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿತ್ತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಜನಪ್ರತಿನಿಧಿಗಳು ರಾಜೀವಿ ಕಾರ್ಯ ಶ್ಲಾಘಿಸಿದ್ದರು.

‘ಇವರು ಗರ್ಭಿಣಿಯನ್ನು ರಾತ್ರಿ ಆಟೋ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ದಿಟ್ಟ ಆಶಾ ಕಾರ್ಯಕರ್ತೆ ರಾಜೀವಿ ರವರು ರಾಖಿ ಕಟ್ಟಿದ ಕ್ಷಣ ನಿಜಕ್ಕೂ ಸಹ ಕರೋನಾ ಎದುರಿಸಲು ಇನ್ನಷ್ಟು ಧೈರ್ಯ ಬಂದಿದೆ’ ಎಂದು ಡಿಸಿ ಜಿ. ಜಗದೀಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Comments are closed.