ಮಂಗಳೂರು, ಆಗಸ್ಟ್.04 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ153 ಮಂದಿಗೆ ಸೋಂಕು ಧೃಢಪಟ್ಟಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಮವಾರ ಸೋಂಕಿತರ ಸಂಖ್ಯೆ 6168ಕ್ಕೆ ಏರಿಕೆಯಾಗಿದೆ.
ಸೋಮವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಿಸಿದ ಪ್ರಕಟಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 153 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸೋಂಕು ಪೀಡಿತರ ಸಖ್ಯೆ ದಿಢೀರ್ ಏರಿಕೆಯಾಗಿದ್ದು,ರವಿವಾರ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಆರು ಸಾವಿರ ದಾಟಿದ್ದು, 6015 ಇತ್ತು. ಆದರೆ ಸೋಮವಾರ ಮತ್ತೆ 153 ಮಂದಿಯಲ್ಲಿ ಸೋಂಕು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 6168ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏಕಾಏಕಿ ಸೋಂಕು ಹರಡುವ ಸ್ವರೂಪವೇ ಬದಲಾಗಿಬಿಟ್ಟಿದೆ. ಆತಂಕಕಾರಿ ವಿಚಾರವೆಂದರೆ ಸೋಂಕಿನ ಮೂಲವೇ ಪತ್ತೆಯಾಗದವರ ಸಂಖ್ಯೆ ಮತ್ತೆ ಮುಂದುವರಿದಿದೆ.
ಸೋಮವಾರದಂದು 124 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 3138 ಮಂದಿ ಸದ್ಯ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯ ತನಕ 2854 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇನ್ನು ಸೋಮವಾರದಂದು 7 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನು ಜಿಲ್ಲೆಯಲ್ಲಿ ಪತ್ತೆಯಾದ ಪಾಸಿಟಿವ್ ಕೇಸ್ ಗಳ ಪೈಕಿ ಮಂಗಳೂರು ತಾಲೂಕಿನಲ್ಲಿ ಅಧಿಕವಾಗಿದ್ದು 119 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಂಟ್ವಾಳದ 11 ಮಂದಿ, ಬೆಳ್ತಂಗಡಿಯ 6 ಮಂದಿ, ಪುತ್ತೂರಿನ ನಾಲ್ವರು, ಸುಳ್ಯದ ಒಬ್ಬರು, ಹೊರ ಜಿಲ್ಲೆಯ 12 ಮಂದಿಯಲ್ಲಿ ಸೋಮವಾರ ಸೋಂಕು ಪತ್ತೆಯಾಗಿದೆ.
ಸೋಮವಾರದ ಪ್ರಮುಖ ಅಂಶಗಳು :
ಜಿಲ್ಲೆಯಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 153 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ
ಸೋಮವಾರದಂದು ಮಂಗಳೂರು ತಾಲೂಕಿನ 119 ಮಂದಿಗೆ ಇಂದು ಕೊರೋನಾ ಪಾಸಿಟಿವ್
ಬಂಟ್ವಾಳದ 11,ಬೆಳ್ತಂಗಡಿಯ 6, ಪುತ್ತೂರಿನ 4 ಹಾಗೂ ಸುಳ್ಯ ತಾಲೂಕಿನ ಓರ್ವ ವ್ಯಕ್ತಿಗೆ ಕೊರೋನಾ ಪಾಸಿಟಿವ್
ಹೊರ ಜಿಲ್ಲೆಯಿಂದ ಬಂದ 12 ಮಂದಿಗೆ ಕೊರೋನಾ ಪಾಸಿಟಿವ್
ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,168 ಮಂದಿಗೆ ಕೊರೋನಾ ಪಾಸಿಟಿವ್
ಜಿಲ್ಲೆಯಲ್ಲಿ ಸೋಮವಾರದಂದು 7 ಮಂದಿ ಕೊರೋನಾ ಮಹಾಮಾರಿಗೆ ಬಲಿ
ಮೃತ ಏಳು ಮಂದಿಯೂ ಮಂಗಳೂರು ನಗರ ನಿವಾಸಿಗಳು
ಕೊರೋನಾಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 176ಕ್ಕೆ ಏರಿಕೆ
ಪ್ರತಿದಿನ ಹೆಚ್ಚಳವಾಗುತ್ತಿರುವ ಕೊರೋನಾ ಸಾವು
Comments are closed.