ಕರಾವಳಿ

ದ.ಕ.ಜಿಲ್ಲೆ: ಅಂಗನವಾಡಿ ಸಹಾಯಕಿ ಹುದ್ದೆಗೆ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು  : ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 2 ಅಂಗನವಾಡಿ ಕಾರ್ಯಕರ್ತೆ ಮತ್ತು 13 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ವೆಬ್‍ಸೈಟ್ ವಿಳಾಸ www.anganwadirecruit.kar.nic.inರಲ್ಲಿ ಜುಲೈನಲ್ಲಿ ಅರ್ಜಿ ಆಹ್ವಾನಿಸಿದೆ.

ಜುಲೈ 30, ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ ಕಾರ್ಯಕರ್ತೆ ಹುದ್ದೆ ಖಾಲಿಯಿರುವ ಅಂಗನವಾಡಿಕೇಂದ್ರದ ವಿವರ ಇಂತಿವೆ:

1) ಬಜ್ಪೆ ಗ್ರಾಮ ಪಂಚಾಯತ್, ಸ್ವಾಮಿಲ ಪದವು ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 2) ಮೂಡಬಿದ್ರೆ ವಾ,ನಂ-06 ಗ್ರಾಮ ಪಂಚಾಯತ್ ಜೈನ್ ಪೇಟೆ ಅಂಗನವಾಡಿ ಕೇಂದ್ರ -ಸಾಮಾನ್ಯ ವರ್ಗ.

ಸಹಾಯಕಿ ಹುದ್ದೆ ಖಾಲಿಯಿರುವ ಅಂಗನವಾಡಿ ಕೇಂದ್ರದ ವಿವರ ಇಂತಿವೆ:-1. ಕೋಟೆಕಾರ್ ಪಟ್ಟಣ ಪಂಚಾಯತ್ ವಾ.ನಂ-5 ರ ಬಗಂಬಿಲ ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 2. ಕೋಟೆಕಾರ್ ಪಟ್ಟಣ ಪಂಚಾಯತ್ ವಾ.ನಂ-11ರ ಪಾನೀರು ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 3. ಕುಪ್ಪೆಪದವು ಗ್ರಾಮ ಪಂಚಾಯತ್ ಕಲ್ಲಾಡಿ ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 4. ಪೆರ್ಮುದೆ ಗ್ರಾಮ ಪಂಚಾಯತ್ ಪಡುಪದವು ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 5. ಮೂಡಬಿದ್ರೆ ಪುರಸಭೆ ವಾ.ನಂ-10ರ ಜ್ಯೋತಿನಗರ ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 6.ಮೂಡಬಿದ್ರೆ ಪುರಸಭೆ ವಾ.ನಂ-12 ರ ನೀರಳಿಕೆ ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 7.ಮೂಡಬಿದ್ರೆ ಪುರಸಭೆ ವಾ.ನಂ-6ರ ಜೈನ್ ಪೇಟೆ ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 8. ಮಂಜನಾಡಿ ಗ್ರಾಮ ಪಂಚಾಯತ್ ಉರುಮಣೆ-2 ರ ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 9. ಉಳ್ಳಾಲ ನಗರಸಭೆ ವಾ.ನಂ-15 ರ ಉಳ್ಳಾಲಬೈಲ್-2 ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 10. ನೀರುಮಾರ್ಗ ಗ್ರಾಮ ಪಂಚಾಯತ್ ಬಿತ್ತುಪಾದೆ ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 11. ಬೆಳುವಾಯಿ ಗ್ರಾಮ ಪಂಚಾಯತ್ ಬೆಳುವಾಯಿ ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 12. ಮುಲ್ಕಿ ನಗರ ಪಂಚಾಯತ್ ವಾ.ನಂ-18 ರ ಚಿತ್ರಾಪು ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ, 13. ಮುಲ್ಕಿ ನಗರ ಪಂಚಾಯತ್ ವಾ.ನಂ-10ರ ಲಿಂಗಪ್ಪಯ್ಯಕಾಡು-3 ಅಂಗನವಾಡಿ ಕೇಂದ್ರ-ಸಾಮಾನ್ಯ ವರ್ಗ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ಗ್ರಾಮಾಂತರ, ಸ್ವೀಕಾರ ಕೇಂದ್ರ ಕಟ್ಟಡ, ವಾಮಂಜೂರು-575028 ದೂರವಾಣಿ ಸಂಖ್ಯೆ:-0824-2263199 ನ್ನು ಸಂಪರ್ಕಿಸಲು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.