ಕರಾವಳಿ

ದ.ಕ.ಜಿಲ್ಲೆಯಲ್ಲಿ ಶುಕ್ರವಾರ 180 ಮಂದಿಯಲ್ಲಿ ಸೋಂಕು ಪತ್ತೆ : ಸೋಕಿತರ ಸಂಖ್ಯೆ 4394ಕ್ಕೆ ಏರಿಕೆ

Pinterest LinkedIn Tumblr

ಮಂಗಳೂರು, ಜುಲೈ. 24 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಸೋಂಕಿತರ ಸಂಖ್ಯೆ ನಿನ್ನೆಗಿಂತ ಸ್ವಲ್ಪ ಕಡಿಮೆಯಾಗಿದ್ದು, 180 ಮಂದಿಗೆ ಸೋಂಕು ಧೃಢಪಟ್ಟಿದೆ. ಕಳೆದ ಹಲವಾರು ದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಸೋಮವಾರದ ಬಳಿಕ ಇಂದು ಸ್ವಲ್ಪ ಕಡಿಮೆಯಾಗಿತ್ತು. ಆದರೆ ಮಂಗಳವಾರ, ಬುಧವಾರ ಹಾಗೂ ಗುರುವಾರ ಮತ್ತೆ ದಿಢೀರ್ ಹೆಚ್ಳಳವಾಗಿತ್ತು.

ಶುಕ್ರವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಿಸಿದ ಪ್ರಕಟಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 180 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಜಿಲ್ಲೆಯಲ್ಲಿ ಸೋಮವಾರ ಸೋಂಕು ಪೀಡಿತರ ಸಂಖ್ಯೆ ಒಮ್ಮೆಲೆ ಇಳಿಕೆಯಾಗಿದ್ದು ಬರೀ 89 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು, ಬಳಿಕ ಮಂಗಳವಾರ, ಬುಧವಾರ ಹಾಗೂ ಗುರುವಾರ ಮತ್ತೆ ದಿಢೀರ್ ಸೋಂಕು ಪೀಡಿತರ ಸಖ್ಯೆ ಏರಿಕೆಯಾಗಿದ್ದು, ನಿನ್ನೆ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ4214ಇತ್ತು.

ಆದರೆ ಶುಕ್ರವಾರ ಸೋಂಕು ಪೀಡಿತರ ಸಂಖ್ಯೆ ನಿನ್ನೆ ಮೊನ್ನೆಗಿಂತ ಸ್ವಲ್ಪ ಕಡಿಮೆಯಾಗಿದ್ದು, ಇಂದು 180 ಮಂದಿಯಲ್ಲಿ ಸೋಂಕು ಪತ್ತೆಯಾಗುವ ಮೂಲಕ ಸೋಕಿತರ ಒಟ್ಟು ಸಂಖ್ಯೆ 4394ಕ್ಕೆ ಏರಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏಕಾಏಕಿ ಸೋಂಕು ಹರಡುವ ಸ್ವರೂಪವೇ ಬದಲಾಗಿಬಿಟ್ಟಿದೆ.

ಇನ್ನು ಜಿಲ್ಲೆಯಲ್ಲಿ ಶುಕ್ರವಾರದಂದು 125 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇಲ್ಲಿಯ ತನಕ ಒಟ್ಟು 187 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 2300 ಮಂದಿ ಪ್ರಸ್ತುತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾಥಮಿಕ ಸಂಪರ್ಕದಿಂದ 56ಯಲ್ಲಿ ಸೋಂಕು ಪತ್ತೆಯಾಗಿದೆ. 68 ಮಂದಿಯಲ್ಲಿ ಐಎಲ್ ಐ ಪ್ರಕರಣಗಳು ದೃಢಪಟ್ಟಿದೆ. 10 ಸಾರಿ ಪ್ರಕರಣಗಳು ಪತ್ತೆಯಾಗಿದೆ. 45 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಯಾಣದಿಂದ ಬಂದವರಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಕೊರೋನಾ ಸೋಂಕಿನಿಂದ ಇಂದು ಮತ್ತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರದ ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 180 ಮಂದಿಗೆ ಕೊರೋನಾ ಪಾಸಿಟಿವ್

ILI ಪ್ರಕರಣದಿಂದ 68 ಮಂದಿಗೆ ಕೊರೋನಾ ಪಾಸಿಟಿವ್

ಪ್ರಾಥಮಿಕ ಸಂಪರ್ಕದಿಂದ 56 ಮಂದಿಗೆ ಕೊರೋನಾ ಪಾಸಿಟಿವ್

ಸಂಪರ್ಕವೇ ಪತ್ತೆಯಾಗದ 45 ಮಂದಿಗೆ ಕೊರೋನಾ ಪಾಸಿಟಿವ್

SARI ಪ್ರಕರಣದಿಂದ 10 ಮಂದಿಗೆ ಕೊರೋನಾ ಪಾಸಿಟಿವ್

ವಿದೇಶದಿಂದ ಬಂದ ಓರ್ವರಿಗೆ ಕೊರೋನಾ ಪಾಸಿಟಿವ್

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಪಾಸಿಟಿವ್.

Comments are closed.