ಕರಾವಳಿ

ದ.ಕ.ಜಿಲ್ಲೆ : ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ- ನಾಳೆ ಸಂದರ್ಶನ

Pinterest LinkedIn Tumblr

ಮಂಗಳೂರು ಜುಲೈ 24 : ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಅಧೀನದಲ್ಲಿ ಬರುವ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಲು ಶುಶ್ರೂಷಕಿ, ಲ್ಯಾಬ್ ಟೆಕ್ನೀಷನ್, ಫಾರ್ಮಸಿಸ್ಟ್ ಹುದ್ದೆಗಳನ್ನು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ತಾತ್ಕಾಲಿಕವಾಗಿ 6 ತಿಂಗಳ ಮಟ್ಟಿಗೆ ನೇಮಕಕ್ಕೆ ಜುಲೈ 25ರಂದು 11 ಗಂಟೆಗೆ ಮಂಗಳೂರಿನ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣ ನೇರ ಸಂದರ್ಶನ ನಡೆಯಲಿದೆ.

ಹುದ್ದೆ ವಿವರ ಇಂತಿವೆ:

1) ಶುಶ್ರೂಷಕಿ – 3 ಹುದ್ದೆ, ವೇತನ – ರೂ. 25 ಸಾವಿರ, ವಿದ್ಯಾರ್ಹತೆ – ಡಿಪ್ಲೋಮ ಇನ್ ನರ್ಸಿಂಗ್ (ನರ್ಸಿಂಗ್ ಕೌನ್ಸಿಲ್‍ನಲ್ಲಿ ನೊಂದಣಿಯಾಗಬೇಕು), 2) ಪ್ರಯೋಗ ಶಾಲಾ ತಂತ್ರಜ್ಞರು – 21 ಹುದ್ದೆ, ವೇತನ – ರೂ. 20 ಸಾವಿರ, ವಿದ್ಯಾರ್ಹತೆ – ಡಿ.ಎಂ.ಎಲ್.ಟಿ ಕರ್ನಾಟಕ ಪ್ಯಾರ ಮೆಡಿಕಲ್ ಬೋರ್ಡ್ ಪ್ರಮಾಣ ಪತ್ರ, 3) ಫಾರ್ಮಸಿಸ್ಟ್ – 34 ವೇತನ – ರೂ. 20 ಸಾವಿರ, ವಿದ್ಯಾರ್ಹತೆ – ಡಿ.ಫಾವ್ರ್ಮ (ಫಾರ್ಮಸಿ ಕೌನ್ಸಿಲ್‍ಲ್ಲಿ ನೊಂದಣಿಯಾಗಬೇಕು).

ಸಲ್ಲಿಸಬೇಕಾದ ದಾಖಲೆಗಳು:- ವಿದ್ಯಾರ್ಹತೆಯ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿ ಹಾಗೂ ಅವುಗಳ ಸ್ವಯಂ ದೃಡೀಕೃತ ನಕಲು ಪ್ರತಿಗಳು, ಅನುಭವಕ್ಕೆ ಆದ್ಯತೆ ನೀಡಲಾಗುವುದು ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಹಾಜರಾಗುವುದು.

ಹೆಚ್ಚಿನ ಮಾಹಿತಿಗೆ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಅಥವಾ ದೂರವಾಣಿ ಸಂಖ್ಯೆ; 0824-2423672 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Comments are closed.