ಕರಾವಳಿ

ಕಂಟೇನರ್ ಲಾರಿಯಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ, 59 ಕೋಣಗಳ ರಕ್ಷಣೆ, ನಾಲ್ವರ ಬಂಧನ

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸೈಬರಕಟ್ಟೆ ಚೆಕ್ ಪೋಸ್ಟ್ ಬಳಿ ಶುಕ್ರವಾರ ಬೆಳಗಿನ ಜಾವ ಪರಿಶೀಲನೆಯ ಸಂದರ್ಭದಲ್ಲಿ ಅಕ್ರಮವಾಗಿ ಕೇರಳಕ್ಕೆ ಕಂಟೇನರ್ ಲಾರಿಯಲ್ಲಿ 59 ಕೋಣಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ವರ್ತಮಾನದಂತೆ ದಾಳಿ ನಡೆಸಿದ ಪೊಲೀಸರು ಕಂಟೇನರ್ ಚಾಲಕ ಸಹಿತ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಹರಿಯಾಣದಿಂದ ಕೇರಳಕ್ಕೆ ಜಾನುವಾರ ಸಾಗಾಟ ಮಾಡುತ್ತಿದ್ದ ಬಗ್ಗೆ ತನಿಖೆ ವೇಳೆ ತಿಳಿದುಬಂದಿದೆ.

ಕೇರಳ ಮೂಲದವರಾದ ಅಬ್ದುಲ್ ಜಬ್ಭ್ರ್(35), ಜೋಮುನ್ (36), ಶಂಶುದ್ದೀನ್ (34), ಹರಿಯಾಣ ಮೂಲದ ಮುಖೀಮ್ (18) ಬಂಧಿತರು. ಅಲ್ಲದೇ ಎಮ್ಮೆ ಕರುಗಳ ಮಾಲಿಕನಾದ ಕೇರಳದ ಅಬ್ದುಲ್ ಅಜೀಜ್ ಹಾಗೂ ಕಂಟೈನರ್ ಮಾಲಿಕ ಮೈಸೂರು ಮೂಲದ ರಫಿಕ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ ಠಾಣೆಯ ಪಿಎಸ್ಐ ಸಂತೋಷ್ ಬಿ.ಪಿ. ಅವರು ಸಿಬಂದಿಗಳ ಜೊತೆ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಪರಿಶೀಲನೆ ನಡೆಸುತ್ತಿರುವ ಸಂದರ್ಭ ಕೋಣಗಳನ್ನು ತುಂಬಿಸಿಕೊಂಡಿದ್ದ ಕಂಟೈನರ್ ಬಂದಿದ್ದು ಪರಿಶೀಲಿಸಿದಾಗ ಲಾರಿಯೊಳಗೆ 59 ಕೋಣಗಳನ್ನು ಹಿಂಸಾತ್ಮಕವಾಗಿ ತುಂಬಲಾಗಿತ್ತು. 8 ಲಕ್ಷ ಮೌಲ್ಯದ ಕಂಟೈನರ್ ಲಾರಿ ಹಾಗೂ 2 ಲಕ್ಷ ಮೌಲ್ಯದ ಎಮ್ಮೆ ಕರುಗಳನ್ನು ಹಾಗೂ ಕಟ್ಟಲು ಉಪಯೋಗಿಸಿದ ನೈಲಾನ್ ಹಗ್ಗವನ್ನು ವಶಕ್ಕೆ ಪಡೆಯಲಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.