ಕರಾವಳಿ

ಕೆಪಿಸಿಸಿ ಶಿಸ್ತುಕ್ರಮ ಸಮಿತಿ ರಚನೆ : ಮಂಗಳೂರಿನ ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ ನೇಮಕ

Pinterest LinkedIn Tumblr

ಮಂಗಳೂರು / ಬೆಂಗಳೂರು : ಪಕ್ಷ‌ ವಿರೋಧಿ ಚಟುವಟಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ನೇತೃತ್ವದಲ್ಲಿ ಶಿಸ್ತುಕ್ರಮ ಸಮಿತಿ ರಚಿಸಿದ್ದಾರೆ.

ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಸದಸ್ಯರಾಗಿ ಮಂಗಳೂರಿನ ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇಮಕಗೊಳಿಸಿದ್ದಾರೆ. 13 ಸದಸ್ಯರ ಈ ಸಮಿತಿಗೆ ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಅಧ್ಯಕ್ಷರಾಗಿದ್ದಾರೆ.

ಸದಸ್ಯರ ವಿವರ :

ಸಮಿತಿಯಲ್ಲಿ ಕೆ.ಬಿ.ಕೋಳಿವಾಡ, ಜೆ. ಅಲೆಗ್ಸಾಂಡರ್, ರಾಣಿ ಸತೀಶ್, ಎಂ ಶಶಿಧರ ಹೆಗ್ಡೆ, ಟಿ.ವಿ. ಮಾರುತಿ, ಕೈಲಾಶ್‌ನಾಥ್ ಪಾಟೀಲ, ಮಲ್ಲಾಜಮ್ಮ, ಜಲಜಾ ನಾಯ್ಕ, ಜೆ. ಹುಚ್ಚಪ್ಪ, ಸಿ.ಎಂ. ಧನಂಜಯ, ಸಯ್ಯದ್ ಜಿಯಾ ಉಲ್ಲಾ, ಇದ್ದಾರೆ.

ನಿವೇದಿತ್‌ ಆಳ್ವಾ ಸಮಿತಿಯ ಸಂಚಾಲಕರು. ಪಕ್ಷ‌ ವಿರೋಧಿ ಚಟುವಟಿಕೆ, ಬಹಿರಂಗ ಹೇಳಿಕೆ, ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕೆಪಿಸಿಸಿಗೆ ಈ ಸಮಿತಿ ವರದಿ ನೀಡಲಿದೆ.

Comments are closed.