ಕರಾವಳಿ

ಭಾಷಾ ಮಹರ್ಷಿ ಡಾ. ಯು. ಪಿ. ಉಪಾಧ್ಯಾಯ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶ್ರದ್ಧಾಂಜಲಿ

Pinterest LinkedIn Tumblr

ಮಂಗಳೂರು : ಹಿರಿಯ ಭಾಷಾ ಶಾಸ್ತ್ರಜ್ಞ, ಬಹು ಭಾಷಾ ವಿದ್ವಾಂಸ, ತುಳು ನಿಘಂಟು ಸಂಪಾದಕರಾಗಿ ಶಾಶ್ವತವಾದ ಕೊಡುಗೆ ನೀಡಿದ ಡಾ. ಯು. ಪಿ. ಉಪಾಧ್ಯಾಯರಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರರವರು ದಿವಂಗತ ಉಪಾಧ್ಯಾಯ ಹಾಗೂ ಅವರ ಪತ್ನಿ ಸುಶೀಲಾ ಉಪಾಧ್ಯಾಯರವರ ಜೀವನ, ಪಾಂಡಿತ್ಯ, ಭಾಷಾ ಸೇವೆಗಳನ್ನು ಅವರ ಅದರ್ಶಗಳನ್ನು ಸ್ಮರಿಸಿ ಪುಷ್ಪ ನಮನ ಸಲ್ಲಿಸಿದರು.

ವಿಮರ್ಶಕ ಕಲಾವಿದ ಡಾ. ಎಂ. ಪ್ರಭಾಕರ ಜೋಶಿಯವರು ಉಪಾಧ್ಯಾಯರನ್ನು ಭಾಷಾ ಶಾಸ್ತ್ರ ಮಹರ್ಷಿ ಎಂದು ವರ್ಣಿಸಿ ಅವರ ಕೃತಿಗಳನ್ನು ಮತ್ತು ಅಧ್ಯಯನ, ಚಿಂತನೆ, ಸರಳ ಜೀವನದ ವಿವರಣೆ ನೀಡಿದರು.

ವಿವಿಧ ರಂಗಗಳ ಪರವಾಗಿ ಎಚ್. ಜನಾರ್ದನ ಹಂದೆ, ಪೊಳಲಿ ನಿತ್ಯಾನಂದ ಕಾರಂತ, ಜಾನ್ ಚಂದ್ರನ್ ಮೊದಲಾದವರು ಉಪಸ್ಥಿತರಿದ್ದು ದಿವಂಗತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Comments are closed.